ಸಿಎನ್‌ಜಿ ಗ್ಯಾಸ್ ಅಭಾವಕ್ಕೆ ಆಕ್ರೋಶ; ಚಳ್ಳಕೆರೆಯಲ್ಲಿ ಆಟೋ ಚಾಲಕರ ಪ್ರತಿಭಟನೆ

Challakere, CNG Bunk, Gas, Auto Drivers,
Published on

ಚಳ್ಳಕೆರೆ: ಸಕಾಲಕ್ಕೆ ಸಿಎನ್‌ಜಿ ಗ್ಯಾಸ್ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿ ನಗರದ ಬಳ್ಳಾರಿ ರಸ್ತೆಯಲ್ಲಿನ ಸಿಎನ್‌ಜಿ ಬಂಕ್ ಬಳಿ ಶನಿವಾರ ನೂರಾರು ಆಟೋ ಚಾಲಕರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಸಿಎನ್‌ಜಿ ಗ್ಯಾಸ್ ತುಂಬುವ ಬಂಕ್ ನಗರದಲ್ಲಿ ಸ್ಥಾಪಿತವಾಗಿ 7 ತಿಂಗಳಾಗಿದೆ. 150 ಆಟೋ ಮತ್ತು ಕೆಲವು ಓಮಿನಿ ವಾಹನಗಳು ಅವಲಂಬಿತವಾಗಿರುವ ಬಂಕ್ ಇದಾಗಿದೆ. ಸಿಎನ್‌ಜಿ ಗ್ಯಾಸ್ ತುಂಬುವ ಯಂತ್ರ ರಿಪೇರಿಯಾಗಿ 2 ತಿಂಗಳಾಗಿದ್ದರೂ ಸಂಬಂಧಪಟ್ಟ ಕಂಪನಿ ಸಿಬ್ಬಂದಿ ಇದಕ್ಕೆ ಪ್ರತಿಕ್ರಿಯಿಸಿಲ್ಲ. ರಿಪೇರಿಯನ್ನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎನ್‌ಜಿ ಗ್ಯಾಸ್ ಅವಲಂಬಿತ ಆಟೋ ಚಾಲಕರಿಗೆ ಬಾಡಿಗೆ ಮತ್ತು ದಿನದ ವೃತ್ತಿಗೆ ತೀವ್ರ ತೊಂದರೆಯಾಗಿದೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡರು. ಈ ವೇಳೆ ತಹಸೀಲ್ದಾರ್ ಎನ್.ರಘುಮೂರ್ತಿ ಸ್ಥಳಕ್ಕಾಗಮಿಸಿ ಆಟೋ ಚಾಲಕರ ಸಮಸ್ಯೆ ಆಲಿಸಿದರು.

ಮನವಿ ಸ್ವೀಕರಿಸಿ, ಮುಂದಿನ 10 ದಿನಗಳೊಳಗೆ ಸಮಸ್ಯೆ ಬಗೆಹರಿಸಲಾಗುವುದು. ಈ ಕೂಡಲೇ ಕಂಪನಿ ಅವರ ಬಳಿ ಚರ್ಚಿಸಿ ಬಂಕ್‌ನ ಯಂತ್ರವನ್ನು ರಿಪೇರಿ ಮಾಡಿಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net