ಪೌರಕಾರ್ಮಿಕರ ನೇಮಕ ತುರ್ತು ಆಗಲಿ

CLK NAGARASABHE 22
Published on

ಚಳ್ಳಕೆರೆ: ಅಂದಾಜು 70 ಸಾವಿರ ಜನಸಂಖ್ಯೆ ಇರುವ ನಗರದ ಸ್ವಚ್ಛತಾ ಕಾರ್ಯ ನಿರ್ವಹಣೆಗೆ ಹೆಚ್ಚಿನ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದು ಅಗತ್ಯವಿದೆ ಎಂದು ನಗರಸಭಾ ಸದಸ್ಯ ಬಿ.ಟಿ.ರಮೇಶ್‌ಗೌಡ ತಿಳಿಸಿದ್ದಾರೆ.

ಕಳೆದ ಐದು ವರ್ಷದ ಅವಧಿಯಲ್ಲಿ ಅನುಮೋದನೆಗಾಗಿ ಅನೇಕ ಬಾರಿ ಜಿಲ್ಲಾಡಳಿತಕ್ಕೆ ಕಳುಹಿಸಿದ್ದರೂ ನೇಮಕಾತಿಗೆ ಅವಕಾಶ ಕೊಡುತ್ತಿಲ್ಲ. ನಗರದಲ್ಲಿದ್ದ 27 ವಾರ್ಡ್‌ಗಳನ್ನು ಜನಸಂಖ್ಯೆ ಆಧಾರವಾಗಿ 31 ವಾರ್ಡುಗಳಾಗಿ ವಿಂಗಡಿಸಲಾಗಿದೆ.

ಪುರಸಭೆ ಆಗಿದ್ದನ್ನು ಈಗ ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ವಿಸ್ತಾರವಾಗಿ ಬೆಳೆಯುತ್ತಿರುವ ನಗರ ಹಾಗೂ ಪ್ರಸ್ತುತ ಕರೊನಾ ಸೇರಿ ವಿವಿಧ ಸಾಂಕ್ರಾಮಿಕ ರೋಗಗಳ ಭೀತಿ. ಇರ್ಷ್ಟೆಲ್ಲದರ ಮಧ್ಯೆಯೂ ಸ್ವಚ್ಛತಾ ಕಾರ್ಯಕ್ಕೆ ಕೇವಲ 46 ಸಿಬ್ಬಂದಿ ದುಡಿಯುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಪ್ರತಿದಿನ ನಗರಕ್ಕೆ 5ರಿಂದ 8 ಸಾವಿರ ಜನಸಂಖ್ಯೆ ಬಂದು ಹೋಗುತ್ತಾರೆ.

ಇದರಿಂದಲೂ ನಗರದಲ್ಲಿ ಸ್ವಚ್ಛತಾ ಕಾರ್ಯ ಒಂದು ಸವಾಲಾಗಿದೆ. ಕೂಡಲೇ ಜನಸಂಖ್ಯೆ ಆಧಾರವಾಗಿ ನಗರದ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಅಗತ್ಯ ಪೌರಕಾರ್ಮಿಕ ಸಿಬ್ಬಂದಿಯ ವ್ಯವಸ್ಥೆಗೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net