ಸ್ವಚ್ಛತೆ ಇದ್ದೆಡೆ ಉತ್ತಮ ಪರಿಸರ

CLK NAGARASBE 31
Published on

ಚಳ್ಳಕೆರೆ: ಸ್ವಚ್ಛತೆ ಇದ್ದೆಡೆ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.

ನಗರಸಭೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರೂ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು ಎಂದರು.

ಎಲ್ಲೆಡೆಯಿಂದ ನಿತ್ಯ ನಗರಕ್ಕೆ ಬರುವ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡಬೇಕು. ಸ್ಥಳೀಯರು ನಿಗದಿ ಸ್ಥಳದಲ್ಲಿ ಕಸ ಸಂಗ್ರಹಿಸಬೇಕು. ಪೌರ ಕಾರ್ಮಿಕರು ಹ್ಯಾಂಡ್ ಬ್ಲೌಸ್ ಮತ್ತು ಮಾಸ್ಕ್ ಬಳಸಿಯೇ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಪೌರಾಯುಕ್ತ ಪಾಲಯ್ಯ, ಆರೋಗ್ಯ ನಿರೀಕ್ಷಕರಾದ ಮಹಲಿಂಗಪ್ಪ, ದಾದಾಪೀರ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net