ಚಳ್ಳಕೆರೆಯಲ್ಲಿ ಧಾರ್ಮಿಕ ಕಾರ್ಯ

CLK POOJAKARYA 06
Published on

ಚಳ್ಳಕೆರೆ: ನಗರದ ಗಾಂಧಿನಗರದಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ 17ನೇ ವರ್ಷಾಚರಣೆಯ ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆಯಿಂದ ರಾತ್ರಿ ವರೆಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿಸಲಾಯಿತು.

ಪೂಜಾ ಆರಂಭದಲ್ಲಿ ಪಂಚಾಮೃತ ಅಭಿಷೇಕ, ತೋಮಲ ಸೇವಾ, ಮಂತ್ರಪುಷ್ಪ ಸೇರಿ ವಿವಿಧ ಪೂಜಾ ಕಾರ್ಯ ನಡೆಸಲಾಯಿತು. ನಿರ್ಮಾಣ ಮಾಡಲಾಗಿದ್ದ ಸಪ್ತ ದ್ವಾರಗಳ ಮೂಲಕ 15 ಸಾವಿರಕ್ಕೂ ಹೆಚ್ಚು ಭಕ್ತರು ಪ್ರವೇಶ ಮಾಡಿ ವೈಕುಂಠ ದೇವರ ದರ್ಶನ ಪಡೆದರು.

ಅರ್ಚಕರಾದ ಪ್ರದೀಪ್‌ಶರ್ಮ, ಪ್ರವೀಣ್ ಶರ್ಮ, ಕುಶಾಲ್‌ಶರ್ಮ, ಸವ್ಯಸಾಚಿ, ಚಂದ್ರಶೇಖರ್, ವೆಂಕಟೇಶ್, ಡಿ.ಎಸ್.ನಾಗಭೂಷಣರಾವ್, ವೆಂಕಟೇಶ್ವರಸ್ವಾಮಿ ಸೇವಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಚಂದ್ರಣ್ಣ, ಉಪಾಧ್ಯಕ್ಷ ಕೆ.ಶಿವಮೂರ್ತಿ, ಕಾರ್ಯದರ್ಶಿ ಟಿ.ರಾಮದಾಸ್, ಖಜಾಂಚಿ ಎನ್.ತಿಪ್ಪೇರುದ್ರಪ್ಪ, ವಿ.ಚನ್ನಕೇಶವಮೂರ್ತಿ, ಟಿ.ತಿಪ್ಪಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net