

ಚಳ್ಳಕೆರೆ: ನಗರದ ಹೊರವಲಯ ಡಿ.ದೇವರಾಜ ಅರಸು ಮತ್ತು ಮೊರಾರ್ಜಿ ವಸತಿ ನಿಲಯದ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದ ಉತ್ತರಪ್ರದೇಶದ ವಲಸೆ ಕಾರ್ಮಿಕರಲ್ಲಿ 34 ಜನರನ್ನು ಗುರುವಾರ ತಮ್ಮ ಊರಿಗೆ ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಹೇಳಿದರು.
ಮುರಾರ್ಜಿ ಶಾಲೆಯಲ್ಲಿ 11 ಜನ, ದೇವರಾಜ ಅರಸು ವಸತಿ ಶಾಲೆಯಲ್ಲಿ 23 ಜನರನ್ನು ಮೇ 16ರಿಂದ ಕ್ವಾರಂಟೈನ್ ಮಾಡಲಾಗಿತ್ತು. ಆರೋಗ್ಯ ಇಲಾಖೆ ಎರಡು-ಮೂರು ಹಂತದ ತಪಾಸಣೆಯಲ್ಲಿ ನೆಗೆಟೀವ್ ಎಂದು ವರದಿ ಬಂದಿರುವ ಕಾರಣ ಬಿಡುಗಡೆಗೊಳಿಸಲಾಗಿದೆ. ಕಾರ್ಮಿಕರನ್ನು ಬೆಂಗಳೂರಿಗೆ ಹೋಗುವ ವ್ಯವಸ್ಥೆ ಮಾಡಿ ಅಲ್ಲಿಂದ ರೈಲು ಮೂಲಕ ಉತ್ತರ ಪ್ರದೇಶದ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ, ಟಿಎಚ್‌ಒ ಡಾ.ಎನ್.ಪ್ರೇಮಸುಧಾ, ಪೌರಾಯುಕ್ತ ಪಾಲಣ್ಣ, ಆರೋಗ್ಯ ಇಲಾಖೆಯ ಎನ್.ಪ್ರೇಮ್ ಕುಮಾರ್, ಎಸ್.ಬಿ.ತಿಪ್ಪೇಸ್ವಾಮಿ, ಎಚ್.ತಿಪ್ಪೇಸ್ವಾಮಿ, ಗಂಗಾಧರ, ಚಂದ್ರಣ್ಣ ಇದ್ದರು.