ತಾಲೂಕು ಬಿಜೆಪಿಯಿಂದ ನೆರವು

CLK BJP 30
Published on

ಚಳ್ಳಕೆರೆ: ನಗರದಲ್ಲಿ ಇರುವ ಪರಸ್ಥಳದವರು, ನಿರಾಶ್ರಿತರ ಬಗ್ಗೆ ತಾಲೂಕು ಆಡಳಿತ ಮಾಹಿತಿ ನೀಡಿದರೆ ತಾಲೂಕು ಬಿಜೆಪಿ ಮಂಡಲದಿಂದ ನೆರವು ಮಾಡಲಾಗುವುದು ಎಂದು ಪಕ್ಷದ ಮುಖಂಡರು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಅವರಲ್ಲಿ ಮನವಿ ಮಾಡಿದರು.

ಊರಿಂದ ಊರಿಗೆ ಹೋಗಲು ವಾಹನ ಸೌಲಭ್ಯ, ತಾತ್ಕಾಲಿಕ ಆಶ್ರಯ ವ್ಯವಸ್ಥೆ ಮಾಡಲು ಅನುಮತಿ ನೀಡುವಂತೆ ಕೇಳಿಕೊಂಡರು. ಇದಕ್ಕೆ ಸ್ಪಂದಿಸಿರುವ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಮಾನವೀಯ ಕಾರ್ಯಗಳಿಗೆ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಈಗಾಗಲೇ ಎರಡು ವಾರಗಳಿಂದ ದುಡಿವ ಕೈಗಳಿಗೆ ಕೆಲಸ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ನಗರದ ವೆಂಕಟೇಶ್ವರ ನಗರ, ಅಂಬೇಡ್ಕರ್ ನಗರ, ಇಂಜಯ್ಯನಹಟ್ಟಿ, ಹಳೇಟೌನ್ ಭಾಗದ ಬಡ ಕುಟುಂಬಗಳ ಅನೂಕುಲಕ್ಕಾಗಿ ಪ್ರತಿ ದಿನ 1 ಕ್ವಿಂಟಾಲ್ ಅಕ್ಕಿ ಅನ್ನ ತಯಾರಿಸಿ ಪ್ರತಿ ಮನೆಗಳಿಗೆ ಪೂರೈಸಲಾಗುವುದು. 10 ದಿನಗಳ ವರೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಮಾಜಿ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ಬಿ.ಎಸ್.ಶಿವಪುತ್ರಪ್ಪ, ಪ್ರಸಾದ್, ಕೆ.ಜಿ.ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net