ಮಹಿಳಾ, ಮಕ್ಕಳ ಆಸ್ಪತ್ರೆ ಉದ್ಘಾಟನೆ

CLK HOSPITAL 12
Published on

ಚಳ್ಳಕೆರೆ: ನಗರದ ಹೃದಯ ಭಾಗದಲ್ಲಿ ನಬಾರ್ಡ್ ಯೋಜನೆಯಡಿ 7.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಜ.13ರಂದು ಉದ್ಘಾಟನೆಗೊಳ್ಳಲಿದೆ.

ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಗೆ ಒಂದು ದಿನಕ್ಕೆ 2ರಿಂದ 3 ಸಾವಿರ ರೋಗಿಗಳು ಬಂದು ಹೋಗುತ್ತಿದ್ದರು. ಇದರಲ್ಲಿ 150ರಿಂದ 200 ರೋಗಿಗಳು ದಾಖಲಾಗುವುದನ್ನು ಕಾಣಲಾಗುತ್ತಿತ್ತು.

ಇಂತಹ ಜನಸಂದಣಿ ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಅಸಾಧ್ಯವಾಗಿತ್ತು. ಈಗ ಮಹಿಳಾ ಮತ್ತು ಮಕ್ಕಳಿಗೆ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆ ಆಗಿರುವುದರಿಂದ ಗರ್ಭಿಣಿಯ ತಪಾಸಣೆ, ಹೆರಿಗೆ, ಶಸ್ತ್ರ ಚಿಕಿತ್ಸೆಗಳು ಪ್ರತ್ಯೇಕವಾಗಿ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net