

ಚಳ್ಳಕೆರೆ: ನಗರದಲ್ಲಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮ ದೇವತೆ ಚಳ್ಳಕೆರಮ್ಮನ ಸಿಡಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಮಾ.2ರಂದು ವಿಶೇಷ ಪೂಜೆಯೊಂದಿಗೆ ದೇವಿಯನ್ನು ದೊಡ್ಡೇರಿ ಸಮೀಪದ ವೇದಾವತಿ ನದಿ ಕರೆದೊಯ್ದು ಅಲ್ಲಿನ ಮೂಲ ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ಬಳಿಕ ಕಲಾ ತಂಡಗಳ ಮೆರವಣಿಗೆ ಮೂಲಕ ದೇವಿಯನ್ನು ಕೊಂಡೊಯ್ದು ಗುಡಿ ತುಂಬಿಸಲಾಯಿತು. 3ರಂದು ದೇವಿಗೆ ಮಾಂಗಲ್ಯಧಾರಣೆ, ಉಡಿ ತುಂಬುವ ಸೇವೆ, ಕೋಣನ ಉತ್ಸವ, ಹಿಟ್ಟಿನಾರತಿ ಸೇವೆ ನೆರವೇರಿಸಲಾಯಿತು.
ಹರಕೆ ಹೊತ್ತ ಭಕ್ತರು ಧವಸ-ಧಾನ್ಯಗಳನ್ನು ಸಮರ್ಪಿಸಿದರು. ಜಾತ್ರೆ ಕೊನೇ ದಿನ ಸಿಡಿ ಉತ್ಸವ, ಪೋತರಾಜರ ವೀರನಾಟ್ಯ ಆಕರ್ಷಣೀಯವಾಗಿತ್ತು.