ಪೌರತ್ವ ತಿದ್ದುಪಡಿ ಕಾಯ್ದೆ ಸರಿ ನಿರ್ಧಾರ

CLK BJP 12
Published on

ಚಳ್ಳಕೆರೆ: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಮೂಲ ನಿವಾಸಿಗಳು ಹಾಗೂ ಯಾವ ಧರ್ಮದವರಿಗೂ ತೊಂದರೆ ಆಗುವುದಿಲ್ಲ ಎಂದು ಪಕ್ಷದ ತಾಲೂಕಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಹೇಳಿದರು.

ಮಂಡಲ ವತಿಯಿಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಕ್ತಿ ಕೇಂದ್ರಗಳಲ್ಲಿ ಶನಿವಾರ ಮನೆ ಮನೆಗೆ ತೆರಳಿ ಕರಪತ್ರ ವಿತರಣೆ ಮಾಡುವ ಎನ್‌ಆರ್‌ಸಿ ಕುರಿತು ಜಾಗೃತಿ ಮೂಡಿಸಿದರು.

ಎನ್‌ಆರ್‌ಸಿ ಜಾರಿಯಿಂದ ಯಾವುದೇ ಜಾತಿ, ಧರ್ಮಕ್ಕೆ ತೊಂದರೆ ಆಗುವುದಿಲ್ಲ. ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಸಹಿಸಿಕೊಳ್ಳಲಾಗದ ವಿರೋಧ ಪಕ್ಷಗಳು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ವಿವಿಧ ಶಕ್ತಿ ಕೇಂದ್ರಗಳ ಅಭಿಯಾನದಲ್ಲಿ ಪರಶುರಾಂಪುರ ಮಂಡಲ ಮಾಜಿ ಅಧ್ಯಕ್ಷ ಸೋಮಶೇಖರ್ ಮಂಡಿಮಠ್, ಈ.ಎನ್.ವೆಂಕಟೇಶ್, ಚನ್ನಕೇಶವ, ದೊಡ್ಡೇರಿ ತಾಪಂ ಸದಸ್ಯ ಸಣ್ಣಸೂರಯ್ಯ, ಭೂಲಿಂಗಪ್ಪ, ದಿನೇಶ್‌ರೆಡ್ಡಿ, ನನ್ನಿವಾಳದ ಪಿ.ಬೋರನಾಯಕ, ಇಂದುಮತಿ, ದೇವರಾಜರೆಡ್ಡಿ, ತುರುವನೂರಿನ ರಾಮದಾಸ್, ಬಿ.ಎಸ್.ಶಿವಪುತ್ರಪ್ಪ, ಕಾಕಿ ಹನುಮಂತರೆಡ್ಡಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net