ಪಿಂಚಣಿ ಬಿಡುಗಡೆಗೆ ಆಗ್ರಹ

CLK MANAVI 10
Published on

ಚಳ್ಳಕೆರೆ: ಐದು ತಿಂಗಳಿನಿಂದ ಸ್ಥಗಿತವಾಗಿರುವ ವಿಧವಾ, ವೃದ್ಧಾಪ್ಯ, ಅಂಗವಿಕಲರ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸಿಪಿಐ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರು ಸೇರಿ ವಿವಿಧ ವರ್ಗದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಂಗವಿಕಲರು, ವೃದ್ಧರು ಮತ್ತು ವಿಧವೆಯರ ಪಿಂಚಣಿ ಸ್ಥಗಿತವಾಗಿದೆ. ಇದನ್ನೇ ನಂಬಿಕೊಂಡಿರುವ ಫಲಾನುಭವಿಗಳಿಗೆ ಜೀವನ ಕಷ್ಟವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಿರುವ ವಿಶೇಷ ಪ್ಯಾಕೇಜ್ ಯೋಜನೆ ಇದುವರೆಗೂ ಜನ ಸಾಮಾನ್ಯರಿಗೆ ಸಿಗುವ ಲಕ್ಷಣಗಳೇ ಕಾಣುತ್ತಿಲ್ಲ. ಜನತೆಗೆ ನೀಡಿರುವ ಯೋಜನೆಯನ್ನು ಕಲ್ಪಿಸುವ ಕೆಲಸ ಆಗದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಳಿಕ ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು. ಸಿಪಿಐ ಸಂಘಟನೆಯ ಸಿ.ವೈ.ಶಿವರುದ್ರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಪಿ.ತಿಪ್ಪೇರುದ್ರಪ್ಪ, ಪಿ.ಒ.ಬಸವರಾಜ, ವೀರೇಶ, ಕೃಷ್ಣನಾಯಕ, ಪಾಪಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net