ನಗರದಿಂದ ಹಳ್ಳಿಗೆ ಬರುವವರು ಎಚ್ಚರದಿಂದಿರಿ

CLK KSRTC 05
Published on

ಚಳ್ಳಕೆರೆ: ಬೆಂಗಳೂರಿನಿಂದ ಹಳ್ಳಿಗಳಿಗೆ ಬರುತ್ತಿರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಎಲ್ಲೂ ತಿರುಗಾಡದೆ ಸ್ವಯಂ ಹೋಂ ಕೌರಂಟೈನ್‌ಗೆ ಒಳಗಾಗಬೇಕು ಎಂದು ಟಿಎಚ್‌ಒ ಡಾ.ಎನ್.ಪ್ರೇಮಸುಧಾ ತಿಳಿಸಿದರು.

ಬೆಂಗಳೂರಿನಿಂದ ಸಾರಿಗೆ ಬಸ್‌ನಲ್ಲಿ ಮಂಗಳವಾರ ನಗರಕ್ಕೆ ಬಂದಿಳಿದ ಕೂಲಿ ಕಾರ್ಮಿಕರ ವೈದ್ಯಕೀಯ ತಪಾಸಣೆ ವೇಳೆ ಮಾತನಾಡಿದರು.

ಹಳ್ಳಿಗಳಲ್ಲಿ ನಗರಗಳಿಂದ ಬರುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇದರಿಂದ ಬೇಸರಪಡದೆ ಪರಸ್ಪರ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು. ಆರೋಗ್ಯ ಇಲಾಖೆಯ ಕ್ವಾರಂಟೈನ್ ವ್ಯವಸ್ಥೆಯಲ್ಲಿ ಎಂಟು ದಿನಗಳ ಕಾಲ ಇರಲು ಕಷ್ಟ ಎಂಬ ಕಾರಣಕ್ಕೆ, ತಪಾಸಣೆ ನಡೆಸಿ ಮುದ್ರೆ ಹಾಕಿ ಕಳುಹಿಸಲಾಗುತ್ತದೆ. ತಾವು ಮನೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಇರಬೇಕು. ಹೊರಗೆ ತಿರುಗಾಡಬಾರದು ಎಂದು ತಿಳಿಸಿದರು.

ಜಿಲ್ಲಾ ಆರ್‌ಆರ್‌ಟಿ ತಂಡದ ಎಂ.ಪ್ರಸನ್ನಕುಮಾರ್, ಎ. ಗಂಗಾಧರ, ಚಂದ್ರಪ್ಪ, ತಾಲೂಕು ಆರ್‌ಆರ್‌ಟಿ ಎಸ್.ಬಿ. ತಿಪ್ಪೇಸ್ವಾಮಿ, ಎಚ್. ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net