

ಚಳ್ಳಕೆರೆ: ಆಂಧ್ರದಲ್ಲಿ ಕರೊನಾ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ತಾಲೂಕಿನ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಬೆಂಗಳೂರು, ಆಂಧ್ರದಿಂದ ತಾಲೂಕಿನ ವಿವಿಧ ಹಳ್ಳಿಗೆ ಬಂದಿರುವವರ ಮಾಹಿತಿ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ ಶನಿವಾರ ಗ್ರಾಮಗಳಿಗೆ ಭೇಟಿ ನೀಡಿ ಮನೆಯಿಂದ ಹೊರ ಬರದಂತೆ ಸೂಚನೆ ನೀಡಿದರು.
ಕರೊನಾ ವೈರಸ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಮತ್ತು ಲಾಕ್‌ಡೌನ್ ನಿಯಮ ಪಾಲನೆ ಮಾಡುವುದು ಕಡ್ಡಾಯ. ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗಳಿಗೆ ಹೋಗುವುದಾಗಲಿ, ಹೊರ ಜಿಲ್ಲೆಯಿಂದ ಬರುವವರಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಬಿ.ತಿಪ್ಪೇಸ್ವಾಮಿ, ಜಿಲ್ಲಾ ಸರ್ವೇಕ್ಷಣಾ ವಿಭಾಗದ ಗಂಗಾಧರ, ಪ್ರಸನ್ನ ಕುಮಾರ್, ಆಶಾ ಕಾರ್ಯಕರ್ತರಾದ ಎಚ್, ಶೈಲಜಾ, ಜ್ಯೋತಿ, ಸಹಾಯಕ ನಾಗರಾಜ, ಗ್ರಾಪಂ ಸದಸ್ಯ ಬಾಬು, ಎನ್. ನಿಂಗಣ್ಣ ಮತ್ತಿತರರು ಇದ್ದರು.