ಬಡಾವಣೆಗೆ ಶಾಸಕ ಪುತ್ರನ ಹೆಸರಿಡಿ

CLK MANAVI 12
Published on

ಚಳ್ಳಕೆರೆ: ನಗರದ ಬಳ್ಳಾರಿ ರಸ್ತೆಯ ಆಶ್ರಯ ಬಡಾವಣೆಗೆ ದಿವಂಗತ ಅಭಿಷೇಕ್ ಬಡಾವಣೆ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಬುಧವಾರ ದಲಿತ ಸಂಘರ್ಷ ಸಮಿತಿ, ಅಲೆಮಾರಿ ದೊಂಬಿ ದಾಸರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು,

ಬಳಿಕ ಪೌರಾಯುಕ್ತ ಪಾಲಯ್ಯ ಅವರಿಗೆ ಮನವಿ ಸಲ್ಲಿಸಿ, ವೆಂಕಟೇಶ್ವರ ನಗರ ಸಮೀಪದ ಪಂಪ್‌ಹೌಸ್ ಬಳಿ ಸಾಮಾಜಿಕ ಸಮಸ್ಯೆಗಳಿಗೆ ಒಳಗಾದ ವಿವಿಧ ಸಮುದಾಯಗಳಿಗೆ ಗೋಮಾಳ ಭೂಮಿಯನ್ನು ವಸತಿ ಪ್ರದೇಶವಾಗಿ ಮಾರ್ಪಡಿಸಿ ಆಶ್ರಯ ನೀಡಲಾಗಿದೆ.

ಶಾಸಕ ಟಿ.ರಘುಮೂರ್ತಿ ಅವರ ಕಾಳಜಿಯಿಂದಾಗಿ ಈ ಕೆಲಸ ಆಗಿದೆ. ಆದ್ದರಿಂದ ಈ ಪ್ರದೇಶಕ್ಕೆ ಶಾಸಕರ ಪುತ್ರ ದಿ.ಅಭಿಷೇಕ್ ಬಡಾವಣೆ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ದಸಂಸ ತಾಲೂಕು ಸಂಚಾಲಕ ಟಿ.ವಿಜಯಕುಮಾರ್, ದೊಂಬಿದಾಸರ ಸಂಘದ ಅಧ್ಯಕ್ಷ ಜಿ.ಎಚ್.ಕೊಟ್ರೇಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net