ಸೆ.3 ರಂದು ಜಿಲ್ಲಾ ಛಲವಾದಿ ಸಮಾವೇಶ

IMG-20230901-WA0004
Published on

ವಿಜಯವಾಣಿ ಸುದ್ದಿಜಾಲ ಗದಗ

ಸೆ.3 ರಂದು ಗದಗ ಜಿಲ್ಲಾ ಮಟ್ಟದ ಛಲವಾದಿ ಸಮುದಾಯ ಚಿಂತನಾ ಸಭೆ ಹಮ್ಮಿಕೊಳ್ಳಲಾಗಿದೆ. ಸಚಿವ ಎಚ್.ಸಿ. ಮಹಾದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಬಸವರಾಜ ಕಡೆಮನಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರದ ಭೀಮಸೇನ ಜೋಶಿ ರಂಗಮಂದಿರದಲ್ಲಿ ಬಳಗ್ಗೆ 10 ಗಂಟೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಿಂತನಾ ಸಮಾವೇಶದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಸಾಧಕರಿಗೆ ರಾಜ್ಯ ಪ್ರಶಸ್ತಿ ವಿತರಿಸಲಾಗುವುದು ಎಂದರು.

ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಕೇರಳದಲ್ಲಿ ಛಲವಾದಿ ಸಮುದಾಯವಿದೆ. ಸಮುದಾಯ ಸಂಘಟನೆ, ಬೆಳವಣಿಗೆ, ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಾನಮಾನ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಪಕ್ಷಾತೀತವಾಗಿ ಈ ಸಭೆ ಜರಗಿಸಲಾಗುತ್ತಿದೆ ಎಂದು ಕಡೆಮನಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಆನಂದ ಸಿಂಗಾಡಿ, ಮುತ್ತು ಚೌಡನ್ನವರ, ಷರೀಫ್ ಬಿಳಿಯಲಿ, ಮಾಂತೇಶ ಮಡ್ನೂರ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net