ಪಂದ್ಯಾವಳಿ ಪ್ರತಿಭೆ ಅನಾವರಣಕ್ಕೆ ಸಹಕಾರಿ

CLK SUDHAKAR 05
Published on

ಚಳ್ಳಕೆರೆ: ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಪಂದ್ಯಾವಳಿಗಳ ಆಯೋಜನೆ ಅತ್ಯಗತ್ಯ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.

ಅಶೋಕ ಸ್ಪೋರ್ಟ್ ಕ್ಲಬ್ ವತಿಯಿಂದ ಬಿಇಒ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 17ನೇ ರಾಜ್ಯ ಮಟ್ಟದ ಹೊನಲು ಬೆಳಕಿನ ಖೋಖೋ ಪಂದ್ಯಾವಳಿಯ 3ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿದ್ದಾರೆ. ಇಂತವರನ್ನು ಸಮಾಜಕ್ಕೆ ಪರಿಚಯಿಸಲು ಪ್ರೋತ್ಸಾಹದ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಕೂಟದ ಆಯೋಜನೆಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದವರೆಗೂ ಕ್ರೀಡಾಪಟುಗಳು ದಾಖಲು ಮಾಡಿರುವ ಇತಿಹಾಸ ಇದೆ. ಮೂರು ದಿನಗಳ ಪಂದ್ಯಾವಳಿಗೆ ಬೆಂಗಳೂರು, ಮೈಸೂರು, ತುಮಕೂರು ಇತರ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿರುವುದು ತಾಲೂಕಿನ ಹೆಮ್ಮೆ ಎಂದು ತಿಳಿಸಿದರು.

ಸ್ಪೋರ್ಟ್ಸ್ ಕ್ಲಬ್‌ನ 20ನೇ ವರ್ಷಾಚರಣೆಗೆ 2023ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖೋಖೋ ಪಂದ್ಯಾವಳಿ ಆಯೋಜನೆಗೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಸಿ.ವೀರಭದ್ರಬಾಬು, ಮಾಜಿ ಸದಸ್ಯ ಎಸ್.ಮುಜೀಬುಲ್ಲಾ, ಸ್ಪೋರ್ಟ್ ಕ್ಲಬ್‌ನ ವಿ.ನಾರಾಯಣರಾವ್, ರೇಣುಕಾ ಪ್ರಸಾದ್, ರಮೇಶ್, ಯತೀಶ್, ಮಂಜುನಾಥ, ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net