ಆ.28ರಿಂದ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ

chakravarthy sulibele
Published on

ಶಿವಮೊಗ್ಗ: ಅಜೇಯ ಸಂಸ್ಕೃತಿ ಬಳಗದಿಂದ ನಮೋ ಬ್ರಿಗೇಡ್ ಸಹಯೋಗದಲ್ಲಿ ಆ.28ರಿಂದ 30ರವರೆಗೆ ಕೋಟೆ ಚಂಡಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿರುವ ಆಚಾರ್ಯತ್ರಯರ ಭವನದಲ್ಲಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಅಜೇಯ ಸಂಸ್ಕೃತಿ ಬಳಗದ ಅಧ್ಯಕ್ಷ ಜೆ.ರಾಮಾಚಾರ್ ತಿಳಿಸಿದರು.

ಪ್ರತಿದಿನ ಸಂಜೆ 6.30ಕ್ಕೆ ಉಪನ್ಯಾಸ ಆರಂಭವಾಗಲಿದೆ. ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ ಎಂಬ ಶೀರ್ಷಿಕೆಯಡಿ ಸೂಲಿಬೆಲೆ ಇಂದಿನ ಆತಂಕದ ಸನ್ನಿವೇಶಗಳ ಕುರಿತು ಮಾತನಾಡಲಿದ್ದಾರೆ. ದೇಶಕ್ಕೆ ಎದುರಾಗಿರುವ ಆಪತ್ತುಗಳು, ದುಷ್ಟಶಕ್ತಿಗಳ ಹುನ್ನಾರದ ಕುರಿತು ವಿವರಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯುವಾ ಬ್ರಿಗೇಡ್ ಸಂಚಾಲಕ ವಿನಯ್ ಮಾತನಾಡಿ, ಭಾರತದ ಅಸ್ಮಿತೆ ಪ್ರೀತಿಸುವ ಪ್ರತಿಯೊಬ್ಬರೂ ಇಂದು ಜಾಗೃತರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಅಜೇಯ ಸಂಸ್ಕೃತಿ ಬಳಗದ ಕಾರ್ಯದರ್ಶಿ ಬಿ.ಆರ್.ಅಚ್ಚುತರಾವ್, ಉಪಾಧ್ಯಕ್ಷ ನಾಗೇಶ್, ನಿರ್ದೇಶಕರಾದ ಹರೀಶ್ ಕಾರ್ಣಿಕ್, ಚೇತನ್, ಕುಮಾರ ಶಾಸ್ತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net