ಅ.6ರಂದು ಕಲಬುರಗಿಗೆ ಚಕ್ರವರ್ತಿ ಸೂಲಿಬೆಲೆ

chakravarti sulibele
Published on

ಕಲಬುರಗಿ: ಖ್ಯಾತ ವಾಗ್ಮಿ, ಪ್ರಖರ ಹಿಂದುತ್ವವಾದಿ ಹಾಗೂ ಯುವಾ ಬ್ರಿಗೇಡ್​ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರು ಅ.6 (ಶುಕ್ರವಾರ)ರಂದು ನಗರಕ್ಕೆ ಆಗಮಿಸಲಿದ್ದಾರೆ.

ನಗರದ ಕೋಟೆ ಮುಂಭಾಗದಲ್ಲಿ ಹಿಂದು ಜಾಗರಣ ವೇದಿಕೆಯಿಂದ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಉತ್ಸವದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಯುವಾ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ ಎಂದು ವೇದಿಕೆ ಪ್ರಮುಖ ನಾಗೇಂದ್ರ ಕಬಾಡೆ ತಿಳಿಸಿದ್ದಾರೆ.

ಸಂಜೆ 6ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ `ವಿಶ್ವಗುರು ಭಾರತ' ವಿಷಯ ಕುರಿತು ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಭಾಷಣ ಆಲಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net