ಕೋಟೇಶ್ವರದಲ್ಲಿ ಚಕ್ರಾಬ್ಜ ಮಂಡಲ ಪೂಜೆ

gan (17)
Published on

ಕುಂದಾಪುರ: ಶ್ರೀ ಕಾಶೀ ಮಠದ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಪಾದರ ಜನ್ಮ ಶತಾಬ್ದಿ ಆಚರಣೆ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಗುರುವರ್ಯರ ಜನ್ಮ ನಕ್ಷತ್ರ ಸ್ವಾತಿ ನಕ್ಷತ್ರದಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯದ ವಿಶೇಷ ಧಾರ್ಮಿಕ ಕಾರ್ಯಕ್ರಮವಾಗಿ ಚಕ್ರಾಬ್ಜ ಮಂಡಲ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯಿತು.

ಶ್ರೀ ವಿಷ್ಣು ಸಹಸ್ರನಾಮ ಪಠನೆ ಮೂಲಕ ಪುಷ್ಪಾಂಜಲಿ ಸಲ್ಲಿಸಿ, ಪ್ರದಕ್ಷಿಣೆ ನಮಸ್ಕಾರ ಸೇವೆ ಸಲ್ಲಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಚಾತುರ್ಮಾಸ್ಯ ಸಮಿತಿ ಸದಸ್ಯರು, ಜಿಎಸ್‌ಬಿ ಸಮಾಜದವರು ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net