ಅಗಡಿಯಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆ

IMG_20240825_133952-2_1-1.jpg
Published on

ಹುಬ್ಬಳ್ಳಿ: ತಾಲೂಕಿನ ಅಗಡಿ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಏರ್ಪಡಿಸಿದ್ದ ಚಕ್ಕಡಿ ಓಡಿಸುವ ಸ್ಪರ್ಧೆಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ ಸಂಗಣ್ಣವರ ಚಾಲನೆ ನೀಡಿದರು.

ರೈತರು ಕ್ರೀಡಾ ಮನೋಭಾವನೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಂತತೆ ಕಾಪಾಡಬೇಕು. ಸ್ಪರ್ಧೆಯಲ್ಲಿ ಗೆದ್ದ ಎತ್ತುಗಳ ಮಾಲೀಕರಿಗೆ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಸಂಗಣ್ಣವರ ಹೇಳಿದರು.

ಗ್ರಾಮದ ರೈತರಾದ ಶಿವನಗೌಡ ಹೊಸಮನಿ, ಶಿವಪ್ಪ ಸಂಗಣ್ಣವರ, ತಮ್ಮನಗೌಡ ಮರೀಗೌಡ, ಅರ್ಜುನ್ ಓಮಕರಿ, ಬಸವರಾಜ ಕಣವಿ, ಫಕೀರಪ್ಪ ಬಿರ್ಜನ್ನವರ, ರಾಮಣ್ಣ ಪೂಜಾರ, ಬಸವರಾಜ ಹಡಪದ, ಮಹದೇವಪ್ಪ ರಾಮಾಪುರ, ಮಲ್ಲಿಕಾರ್ಜುನ ನಲವಾಡಿ.

ಮಹದೇವಪ್ಪ ಉಳ್ಳಾಗಡ್ಡಿ, ನಾಗಯ್ಯ ಮಠಪತಿ, ಮೌಲಾಸಾಬ ನದಾಫ್, ರಮೇಶ ಹರಿಜನ, ರವಿ ಕವಲೂರು, ಮಹದೇವಪ್ಪ ಸಂಗಣ್ಣವರ, ಚನ್ನಬಸಯ್ಯ ಮಠಪತಿ, ಸಿದ್ಲಿಂಗ್ ಸಂಗಣ್ಣವರ, ಮಲ್ಲಿಕಾರ್ಜುನ ಹಾನಗಲ್, ಬಸವಂತಪ್ಪ ಉಳ್ಳಾಗಡ್ಡಿ, ಲಕ್ಷ್ಮಣ ತಳವಾರ, ಬಸವನಗೌಡ ಮರಿಗೌಡರ, ಮಹಾಂತೇಶ ಹೊಸಮನಿ, ಚಕ್ಕಡಿ ಸ್ಪರ್ಧೆ ಪ್ರೇಮಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net