ಚೈತ್ರಾ ಕುಂದಾಪುರ ಪ್ರಕರಣ, ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?

Chaithra Kundapura (1)
Published on

ಮೈಸೂರು: ಚೈತ್ರಾ ಕುಂದಾಪುರ ವಿಚಾರವಾಗಿ ಪ್ರತಿಕ್ರಿಯಿಸಲು ಸಂಸದ ಪ್ರತಾಪ್ ಸಿಂಹ ಹಿಂದೇಟು ಹಾಕಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳು ಚೈತ್ರಾ ಕುಂದಾಪುರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಬಯಿಸಿದಾಗ, ಆ ವಿಚಾರವೆಲ್ಲ ನನಗೆ ಗೊತ್ತಿಲ್ಲ, ಬಿಟ್ಟುಬಿಡಿ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.

ಈ ಬಾರಿ ಸರಳವಾಗಿ ದಸರಾ ಆಚರಿಸಬೇಕೇ ಅಥವಾ ಅದ್ಧೂರಿಯಾಗಿ ಆಚರಿಸಬೇಕೇ ಎಂಬ ಕುರಿತು ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ದಸರಾವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಲೇ ಬೇಕಾಗಿದೆ. ಆ ರೀತಿ ದಸರಾ ಆಚರಣೆ ಮಾಡುವಾಗ ಒಂದಷ್ಟು ಖರ್ಚು ಇದ್ದೇ ಇರುತ್ತದೆ. ದಸರಾವನ್ನು ದಸರಾ ರೀತಿ ಆಚರಿಸೋಣ, ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net