

ಸುಳ್ಯ: ಕರ್ನಾಟಕ ವೈಜ್ಞಾನಿಕ ಪರಿಷತ್ತಿನ ವತಿಯಿಂದ ಅತ್ಯುತ್ತಮ ಸಾಧನೆಗೈದ ಮಹಿಳೆಯರಿಗೆ ಪ್ರಥಮ ಬಾರಿಗೆ ನೀಡಲಾಗುವ ರಾಜ್ಯಮಟ್ಟದ ಚೈತನ್ಯ ಶ್ರೀ-2024 ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಪನ್ಯಾಸಕಿ ಡಾ.ಅನುರಾಧಾ ಕುರುಂಜಿ ಆಯ್ಕೆಯಾಗಿದ್ದಾರೆ. ಎನ್‌ಎಸ್‌ಎಸ್, ಸ್ಕೌಟ್ಸ್-ಗೈಡ್ಸ್,, ಜೇಸಿಸ್, ರೆಡ್‌ಕ್ರಾಸ್ ಮೊದಲಾದ ಸಂಸ್ಥೆಗಳಲ್ಲಿ ಹಲವು ಪ್ರಥಮಗಳೊಂದಿಗೆ ದಾಖಲೆಗಳನ್ನು ನಿರ್ಮಿಸಿರುವ ಡಾ.ಅನುರಾಧಾ ಕುರುಂಜಿಯವರು ಶಿಕ್ಷಣದ ಜತೆಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ 2500ಕ್ಕೂ ಮಿಕ್ಕಿ ತರಬೇತಿಗಳನ್ನು ನೀಡಿದ್ದಾರೆ. ಡಿ.28 ಮತ್ತು 29ರಂದು ಬೆಂಗಳೂರಿನ ಯಲಹಂಕದ ವಿ.ಜೆ.ಇಂಟರ್‌ನ್ಯಾಶನಲ್ ಶಾಲಾ ಮೈದಾನದಲ್ಲಿ ನಡೆಯಲಿರುವ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.