ಶೀಲಾಶಶಿಧರ್ ಪ್ರಭಾರ ಅಧ್ಯಕ್ಷೆ

oplus_2
oplus_2
Published on

ನೆಲಮಂಗಲ: ಅವಿಶ್ವಾಸ ಗೊತ್ತುವಳಿಯಿಂದ ತೆರವಾಗಿದ್ದ ಸೊಂಡೆಕೊಪ್ಪ ಗ್ರಾಮಪಂಚಾಯಿತಿ ಪ್ರಭಾರ ಅಧ್ಯಕ್ಷೆಯಾಗಿ ಶೀಲಾಶಶಿಧರ್ ಅಧಿಕಾರ ವಹಿಸಿಕೊಂಡರು.

ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಸೊಂಡೆಕೊಪ್ಪ ಗ್ರಾಮಪಂಚಾಯಿತಿಯಲ್ಲಿ 21 ಸದಸ್ಯರಿದ್ದು ಬಹುತೇಕ ಸದಸ್ಯರು ಅಧ್ಯಕ್ಷೆ ಕುಸುಮಾಚಿಕ್ಕಣ್ಣ ವಿರುದ್ಧ ಅವಿಶ್ವಾಸ ಮಂಡಿಸಿದ್ದರು.

ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಉಪವಿಭಾಗಾಧಿಕಾರಿ ಪ್ರಮೋದ್ ಪಾಟೀಲ್ ಗ್ರಾಮಪಂಚಾಯಿತಿಗೆ ಭೇಟಿ ನೀಡಿ ಅಧ್ಯಕ್ಷರಿಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದರು. 17 ಸದಸ್ಯರು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಾಡಿದ್ದರಿಂದ ಉಪವಿಭಾಗಾಧಿಕಾರಿ ತಾಪಂ ಇಒಗೆ ವರದಿ ನೀಡಿದ್ದರು.

ಉಪವಿಭಾಗಾಧಿಕಾರಿ ವರದಿಯಂತೆ ಡಿ.26 ರಂದು ಹಾಲಿ ಉಪಾಧ್ಯಕ್ಷೆಗೆ ಪ್ರಭಾರ ಅಧ್ಯಕ್ಷರಾಗಿ ಮುಂದುವರೆಯಲು ಆದೇಶ ಮಾಡಿದ್ದರು. ಈ ಹಿನ್ನಲೆಯಲ್ಲಿ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಪ್ರಭಾರ ಅಧ್ಯಕ್ಷೆ ಶೀಲಾಶಶಿಧರ್ ಅಧಿಕಾರವಹಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net