ಇಸ್ಕಾನ್​ ಟೆಂಪಲ್​ ಎದುರಲ್ಲೇ ಆರೋಪಿಗಳಿಬ್ಬರಿಗೆ ಗುಂಡೇಟು!

Shoot
Published on

ಬೆಂಗಳೂರು: ಇಸ್ಕಾನ್ ಟೆಂಪಲ್ ಮುಂದೆಯೇ ಭಾನುವಾರ ರಾತ್ರಿ ಆರೋಪಿಗಳಿಬ್ಬರು ಪೊಲೀಸರಿಂದ ಗುಂಡೇಟು ತಿಂದಿದ್ದಾರೆ.

ರಾಜಾಜಿನಗರದ 4ನೇ ಬ್ಲಾಕ್​ನಲ್ಲಿ 61 ವರ್ಷದ ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಸರಗಳ್ಳರಿಬ್ಬರು ಬೈಕ್​ನಲ್ಲಿ ಪರಾರಿಯಾಗುತ್ತಿದ್ದರು. ಕಳ್ಳರ ಹೆಡೆಮುರಿ ಕಟ್ಟಲು ಮುಂದಾದ ರಾಜಾಜಿನಗರ ಠಾಣೆ ಇನ್​ಸ್ಪೆಕ್ಟರ್ ಎನ್.ಆರ್.ವೆಂಕಟೇಶ್ ಮತ್ತು ಶ್ರೀರಾಂಪುರ ಠಾಣೆಯ ಪಿಎಸ್​ಐ ವಿನೋದ್​ ನಾಯ್ಕ್ ಅವರು ಆರೋಪಿಗಳ ಬೆನ್ನಟ್ಟಿದ್ದರು. ಇದನ್ನೂ ಓದಿರಿ ಊಟ ಕೇಳಿದ್ದಕ್ಕೆ ಮಗುವಿನ ಮೈಯನ್ನು ಬೆಂಕಿಯಿಂದ ಸುಟ್ಟಿ ವಿಕೃತಿ ಮೆರೆದ ಅಜ್ಜಿ

ಸರ ಕದ್ದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿಗಳು ಕೊನೆಗೂ ಇಸ್ಕಾನ್ ಟೆಂಪಲ್ ಬಳಿ ಪತ್ತೆಯಾದರು. ಅವರನ್ನು ಹಿಡಿಯಲು ಹೋದ ಪೊಲೀಸ್​ ಸಿಬ್ಬಂದಿ ಮೇಲೆ ಕಳ್ಳರು

ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಆರೋಪಿಗಳ ಕಾಲಿಗೆ ಇನ್​ಸ್ಪೆಕ್ಟರ್ ಎನ್.ಆರ್. ವೆಂಕಟೇಶ್​ ಗುಂಡು ಹಾರಿಸಿ ಬಂಧಿಸಿದರು. ಪೊಲೀಸರಿಂದ ಗುಂಡೇಟು ತಿಂದು ಸಿಕ್ಕಿಬಿದ್ದ ಆರೋಪಿಗಳ ಹೆಸರು ಸುಭಾಷ್ ಮತ್ತು ಸಂಜೀವ್.

ಗಾಯಾಳು ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಹೆಚ್ಚುತ್ತಲೇ ಇದೆ. ಜನದಟ್ಟಣೆ ಪ್ರದೇಶದಲ್ಲೂ ಕಳ್ಳರು ನಿರಾತಂಕವಾಗಿ ತಮ್ಮ ಕೈಚಳಕ ತೋರಿಸುತ್ತಲೇ ಇದ್ದಾರೆ. ಇಂತಹ ದುಷ್ಟರಿಗೆ ಕಾನೂನಿನ ಬಿಸಿ ಮುಟ್ಟಿಸಲು ಮುಂದಾಗಿರುವ ಪೊಲೀಸ್​ ಪಡೆ ಕಟ್ಟೆಚ್ಚರ ವಹಿಸಿದೆ. ಭಾನುವಾರ ರಾತ್ರಿ ಸರಗಳ್ಳರಿಬ್ಬರು ಎಸ್ಕೇಪ್​ ಆಗುತ್ತಿರುವ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net