ಚಡಚಣ ವ್ಯಾಪ್ತಿಯಲ್ಲಿ ಡಿ.8 ರಂದು ವಿದ್ಯುತ್ ವ್ಯತ್ಯಯ

Published on

ಚಡಚಣ: ಪಟ್ಟಣದ ಬೋರಿ ಹಳ್ಳದ ಪಕ್ಕದಲ್ಲಿ ಸೋಲಾರ್ ಸ್ಥಾವರದ ಕಾಮಗಾರಿ ಇರುವುದರಿಂದ ಡಿ.8 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 110/11 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಚಡಚಣ ಪಟ್ಟಣದ ಎಫ್ -5 ಪೀಡರ್ (ವಾರ್ಡ್ ನಂ.10 ರಿಂದ 15 ಮರಡಿ ವ್ಯಾಪ್ತಿ) ದೇವರನಿಂಬರಗಿ ಕ್ರಾಸ್, ಹತ್ತಳ್ಳಿ ರಸ್ತೆ, ಗೋಡಿಹಾಳ ರಸ್ತೆ ಮತ್ತು ಇಂದಿರಾ ನಗರ ಹಾಗೂ ಹಾಲಳ್ಳಿ ಎಫ್- 6 ಪೀಡರ್‌ಗಳ ವ್ಯಾಪ್ತಿಯ ಗ್ರಾಮಗಳ ನಿರಂತರ ಜ್ಯೋತಿ ಮತ್ತು ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಸರಬರಾಜು ಮಾಡುವಲ್ಲಿ ಅಡಚಣೆ ಉಂಟಾಗುವುದು ಎಂದು ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net