ಮಿಂಚಿನ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸಿದ ಪೊಲೀಸರು

CDN-29-2
ವ್ಯಾಪಾರಿಯೊಬ್ಬರ ಕಣ್ಣಿಗೆ ಖಾರದಪುಡಿ ಎರಚಿ 12.5 ಲಕ್ಷ ರೂ. ದೋಚಿದ ಮೂವರನ್ನು ಚಡಚಣ ಪೊಲೀಸರು ಬಂಧಿಸಿರುವುದು.
Published on

ಚಡಚಣ: ವ್ಯಾಪಾರಿಯೊಬ್ಬರ ಕಣ್ಣಿಗೆ ಖಾರದಪುಡಿ ಎರಚಿ 12.5 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಮೂವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ಗ್ರಾಮದ ರಂಜೀತ ಕಾಳೆ(27), ವಿಠ್ಠಲ ಘೋಲೆ (47) ಹಾಗೂ ಸಚಿನ್ ಶಿರಕೆ (33) ಬಂಧಿತರು. ಸಾಂಗೋಲಾದ ಚಂದ್ರಕಾಂತ ಮಸ್ಕಿ ಎಂಬ ವ್ಯಾಪಾರಿ ವಸ್ತುಗಳನ್ನು ಖರೀದಿಸಲೆಂದು ಚಡಚಣ ಪಟ್ಟಣಕ್ಕೆ ಗೂಡ್ಸ್ ವಾಹನದಲ್ಲಿ ಜು.25ರಂದು ಆಗಮಿಸುತ್ತಿದ್ದಾಗ ದರೋಡೆಕೋರರು ವಾಹನ ತಡೆದು ಬೆದರಿಸಿ ಕಣ್ಣಿಗೆ ಖಾರದಪುಡಿ ಎರಚಿ 12.5 ಲಕ್ಷ ರೂ. ದೋಚಿದ್ದರು. ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net