ರಸ್ತೆ ಮೇಲೆ ಉರುಳಿ ಬಿದ್ದ ಮರ

CDN 16-1
Published on

ಚಡಚಣ: ಭಾರಿ ಮಳೆಯಿಂದಾಗಿ ಸಕ್ಕರೆ ಕಾರ್ಖಾನೆ ಸಮೀಪದ ಹತ್ತಳ್ಳಿ-ಚಡಚಣ ರಸ್ತೆ ಮೇಲೆ ಬೃಹತ್ ಜಾಲಿಮರ ಉರುಳಿ ಬಿದ್ದ ಪರಿಣಾಮ ಗುರುವಾರ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸಂಜೆ ಆರಂಭಗೊಂಡ ಮಳೆ ಗುರುವಾರ ಬೆಳಗಿನವರೆಗೂ ಸುರಿದಿದ್ದರಿಂದ ಮಣ್ಣು ಕುಸಿದು ಜಾಲಿಮರ ರಸ್ತೆ ಮೇಲೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಬುಧವಾರ ಮಧ್ಯರಾತ್ರಿಯೇ ರಸ್ತೆ ಮೇಲೆ ಬಿದ್ದ ಮರವನ್ನು ಗುರುವಾರ ಬೆಳಗ್ಗೆಯಾದರೂ ಸಂಬಂಧಿಸಿದ ಇಲಾಖೆಯವರು ತೆರವುಗೊಳಿಸದ ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡಿದರು. ಉಮರಾಣಿ, ಹೊಳೆಸಂಖ, ಹತ್ತಳ್ಳಿ ಹಾಗೂ ಹಾವಿನಾಳ ಗ್ರಾಮದಿಂದ ಚಡಚಣಕ್ಕೆ ಬರುವ ವಾಹನಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಪರ್ಯಾಯ ರಸ್ತೆ ಮೂಲಕ ಚಡಚಣ ಪಟ್ಟಣಕ್ಕೆ ಆಗಮಿಸಿದವು. ಕೊನೆಗೆ ಮಾಧ್ಯಮದವರಿಂದ ವಿಷಯ ತಿಳಿದ ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಜೆಸಿಬಿ ಮುಖಾಂತರ ರಸ್ತೆ ಮೇಲೆ ಬಿದ್ದ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net