

ಚಡಚಣ: ಪಟ್ಟಣದಲ್ಲಿ ಸರ್ಕಾರಿ ಪ್ರೌಢ, ಪಪೂ ಹಾಗೂ ಪದವಿ ಮಹಾ ವಿದ್ಯಾಲಯಗಳನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಕರವೇ (ಸ್ವಾಭಿಮಾನಿ ಬಣ) ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎನ್.ಬಿ. ಗೆಜ್ಜಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕರವೇ (ಸ್ವಾಭಿಮಾನಿ ಬಣ) ಚಡಚಣ ವಲಯಾಧ್ಯಕ್ಷ ಸುನೀಲ ಕ್ಷತ್ರಿ ಮಾತನಾಡಿ, ನೂತನ ತಾಲೂಕು ಪಟ್ಟಣದಲ್ಲಿ 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಪಟ್ಟಣದಲ್ಲಿರುವ ಖಾಸಗಿ ಶಾಲೆ ಕಾಲೇಜುಗಳಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ಭರಿಸಲು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಹೊರೆಯಾಗುತ್ತಿದೆ. ಅಲ್ಲದೆ, ಉನ್ನತ ಶಿಕ್ಷಣ ಪಡೆಯದೇ ದೂರು ಉಳಿಯುತ್ತಿದ್ದಾರೆ. ಆದ್ದರಿಂದ ತಾಲೂಕು ಕೇಂದ್ರವಾದ ಪಟ್ಟಣದಲ್ಲಿ ಸರ್ಕಾರಿ ಪ್ರೌಢ, ಪಪೂ ಹಾಗೂ ಪದವಿ ಮಹಾವಿದ್ಯಾಲಯಗಳು ಬರುವ ಶೈಕ್ಷಣಿಕ ವರ್ಷದಿಂದ ಆರಂಭಿಸಬೇಕು. ಇಲ್ಲದಿದ್ದರೆ ಬೀದಿಗಳಿದು ಉಗ್ರ ಮಾಡುವುದಾಗಿ ಎಚ್ಚರಿಸಿದರು.
ಕರವೇ (ಸ್ವಾಭಿಮಾನಿ ಬಣ), ಚಡಚಣ ವಲಯದ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಕುಂಬಾರ, ಕಾರ್ಯಕರ್ತರಾದ ವಿಠ್ಠಲ ಕ್ಷತ್ರಿ, ಸಂಜು ಕ್ಷತ್ರಿ, ಸಂತೋಷ ಕ್ಷತ್ರಿ, ಪ್ರವೀಣ ಶಿಂಧೆ, ರಮೆಶ ಮಾಳಕೊಟಗಿ, ರವಿ ಕಟ್ಟಿಮನಿ, ರೋಹನ್ ಕಾಡ, ಶರಣಯ್ಯ ಹಿರೇಮಠ, ಶಿವರಾಜ ಬ್ಯಾಡೆ, ವಿನಾಯಕ ಸೊನ್ನದ, ಶೋಭಾ ಕ್ಷತ್ರಿ, ಗೌರಬಾಯಿ ಕ್ಷತ್ರಿ ಮತ್ತಿತರರಿದ್ದರು.