ರಂಗಭೂಮಿಗೆ ಸಿಜಿಕೆ ಕೊಡುಗೆ ಅಪಾರ

29 06 2025_BGR RURAL_PAGE_7A
ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ದೊಡ್ಡರಾಮಯ್ಯ, ಡಿ.ಮುನಿರಾಜು ಅವರಿಗೆ ರಾಜ್ಯಮಟ್ಟದ ಸಿಜಿಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖ್ಯಾತ ಸಾಹಿತಿ ಡಾ.ಯಲ್ಲಪ್ಪಕೆ.ಕೆ.ಪುರ, ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಸಿ.ಸಿದ್ದರಾಜು ಇದ್ದರು.
Published on

ನೆಲಮಂಗಲ : ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದು, ಅಂಗವೈಕಲ್ಯ ಎಂಬುದು ದೇಹಕ್ಕೆ ಮಾತ್ರ ಮನಸ್ಸಿಗಲ್ಲ ಎಂಬುದು ಸಾಬೀತು ಮಾಡಿ ರಂಗಭೂಮಿಯಲ್ಲಿ ಸಾಧನೆ ಮಾಡಿದ್ದಾರೆ ಎಂದು ಸಾಹಿತಿ ಡಾ.ಯಲ್ಲಪ್ಪ ಕೆ.ಕೆ.ಪುರ ತಿಳಿಸಿದರು.

ನಗರದ ದಿವ್ಯಾ ಜ್ಯೋತಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಕರ್ನಾಟಕ ಬೀದಿ ರಂಗಭೂಮಿ ಅಕಾಡೆಮಿ ಹಾಗೂ ರಂಗಶಿಕ್ಷಣ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ಸಿಜಿಕೆ (ಸಿ.ಜಿ.ಕೃಷ್ಣಸ್ವಾಮಿ) ರಂಗ ಪುರಸ್ಕಾರ ಹಾಗೂ ರಾಜ್ಯ ಮಟ್ಟದ ಸಿಜಿಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ದರಾಜು ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ಬೀದಿ ನಾಟಕದ ಮೂಲಕ ತಿದ್ದುವ ಕೆಲಸವನ್ನು ಸಿಜಿಕೆ ಮಾಡಿದ್ದಾರೆ. ಬಿಹಾರದಲ್ಲಿ ದಲಿತರ ಮೇಲಿನ ದೌರ್ಜನ್ಯವನ್ನು ಬೀದಿ ನಾಟಕ ಮೂಲ ಅಭಿನಯಿಸಿ ಇಡೀ ದೇಶವೇ ರಾಜ್ಯದ ಕಡೆ ತಿರುಗಿ ನೋಡುವಂತೆ ಮಾಡಿದ್ದ ಮಹಾನ್​ ವ್ಯಕ್ತಿ. ನಾಟಕ, ನಿರ್ದೇಶಕರಿಗೆ ಕೇವಲ 8 ಲಕ್ಷ ರೂ.ದಲ್ಲಿ ಸಾವಿರಾರು ಕಾರ್ಯಕ್ರಮ ಮಾಡಿ ರಂಗಭೂಮಿಗೆ ವಿಭಿನ್ನ ರೀತಿ ಪ್ರಯತ್ನಿಸುವ ಕೆಲಸ ಮಾಡಿದ್ದಾರೆ. ಕಲಾವಿದರಿಗೆ ಆತ್ಮವಿಶ್ವಾಸ ತುಂಬಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ವ್ಯಕ್ತಿಗಳನ್ನು ಗುರುತಿಸಿ ರಾಜ್ಯಮಟ್ಟದ ಸಿಜಿಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.

ಸಿಜೆಕೆ ಪುರಸ್ಕಾರ : ತಾಲೂಕಿನ ಹಿರಿಯ ಕಲಾವಿದ ದೊಡ್ಡರಾಮಯ್ಯ ಹಾಗೂ ದೊಡ್ಡಬಳ್ಳಾಪುರದ ಡಿ.ಮುನಿರಾಜು ಅವರಿಗೆ ರಾಜ್ಯಮಟ್ಟದ ಸಿಜಿಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಹಿತಿ ಹಕ್ಕು ಆಯೋಗ ನಿವೃತ್ತ ಆಯುಕ್ತ ಡಾ.ಕೃಷ್ಣಮೂರ್ತಿ, ಕಲಾವಿದರ ಸಂದ ಗ್ರಾಮಾಂತರ ಜಿಲ್ಲಾಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಸಾಹಿತಿ ಡಾ.ಭೋಗಣ್ಣ, ರಂಗಶಿಕ್ಷಣ ಕೇಂದ್ರ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು, ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಬೂದಿಹಾಲ್​ ಕಿಟ್ಟಿ, ಪ್ರಧಾನ ಕಾರ್ಯದರ್ಶಿ ವಿಜಯ್​ ವೀಳ್ಯದೆಲೆ, ಜಿಲ್ಲಾ ನಿರ್ದೇಶಕ ಆನಂದ್​ ಮೌರ್ಯ, ಉಪನ್ಯಾಸಕ ಮಾರುತಿ, ಕಲಾವಿದರಾದ ಸಿ.ಎಚ್​.ಸಿದ್ದಯ್ಯ, ಬೈರನಹಳ್ಳಿ ಪ್ರಕಾಶ್​ ಮೂರ್ತಿ, ದಿನೇಶ್​, ಶ್ರೀನಿವಾಸ್​, ದಶರಥ, ಎನ್​.ಆರ್​.ನಾಗರಾಜು, ವೆಂಕಟೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net