ಸಿ.ಜಿ. ಪಾಟೀಲ ಕೊಡುಗೆ ಸ್ಮರಣೀಯ

21 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಸ್ಯಶಾಸ್ತ್ರ ಹಾಗೂ ತಳಿ ವಿಜ್ಞಾನ ಕ್ಷೇತ್ರದಲ್ಲಿ ದಿ. ಪ್ರೊ. ಸಿ.ಜಿ. ಪಾಟೀಲ ಕೊಡುಗೆ ಅಪಾರ. ತಳಿ ವಿಜ್ಞಾನ ವಿಭಾಗ ಆರಂಭಿಸಿದ ಪಾಟೀಲ ಆದರ್ಶ ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ಹಾಸನ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಟಿ.ಸಿ. ತಾರಾನಾಥ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯ ಮತ್ತು ಕರ್ನಾಟಕ ವಿಜ್ಞಾನ ಕಾಲೇಜಿನ ಹಳೇ ವಿದ್ಯಾರ್ಥಿಗಳ ಬಳಗದಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ಸಿ.ಜಿ. ಪಾಟೀಲ ಗುರುಸ್ಮರಣೆ ಅವರು ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಸುಭಾಷ ಹಿರೇಮಠ ಮಾತನಾಡಿ, ಸಿ.ಜಿ. ಪಾಟೀಲರು ಅತ್ಯಂತ ಕಡಿಮೆ ಅವಧಿಯಲ್ಲಿ ತಳಿ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಂಶೋಧನೆಗಳು ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನವಾಗುವ ಅರ್ಹತೆ ಹೊಂದಿದ್ದವು ಎಂದರು.
ಕವಿವಿ ವಿಶ್ರಾಂತ ಕುಲಸಚಿವ ಡಾ. ಎಸ್​.ಬಿ. ಹಿಂಚಿಗೇರಿ ಮಾತನಾಡಿ, ತಳಿ ವಿಜ್ಞಾನ ಮತ್ತು ಜೀವರಾಸಯನ ಶಾಸ್ತ್ರಕ್ಕೆ ಇರುವ ಸಂಬಂಧದ ಬಗ್ಗೆ ಅಪಾರ ಸಂಶೋಧನೆ ಮತ್ತು ಜ್ಞಾನ ಹೊಂದಿದ್ದರು. ಅಷ್ಟೇ ಅಲ್ಲದೆ ಕವಿವಿಯಲ್ಲಿ ಸ್ಥಾಪನೆಯಾದ ತಳಿವಿಜ್ಞಾನ ವಿಭಾಗಕ್ಕೆ ಅವರ ಕೊಡುಗೆ ಶ್ಲಾನೀಯ ಎಂದರು.
ಕೆಸಿಡಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಬಿ. ಕರಡೋಣಿ, ಕವಿವಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್​.ಎನ್​.ಅಗಡಿ, ಕರ್ನಾಟಕ ವಿಜ್ಞಾನ ಕಾಲೇಜು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ.ಕೊಟ್ರೇಶ, ತಳಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಡೋರಿಸ್​ ಸಿಂಗ್​, ಡಾ. ಸುರೇಶ ಅರಕೇರಾ, ಡಾ. ಜಿ.ಎಚ್​.ಮಳಿಮಠ, ಮಿರಜ್​ಕರ್​, ಸೇರಿ ಇತರರು ನುಡಿನಮನ ಸಲ್ಲಿಸಿದರು.
ಎಂ.ಎಸ್​.ಸಾಲುಂಕಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾಲೇಜು, ದೃಷ್ಟಿ ಪ್ಯಾರಾಮೆಡಿಕಲ್​ ಕಾಲೇಜಿನ ಶಿಕ್ಷಕರು, ವಿದ್ಯಾಥಿರ್ಗಳು, ಇತರರು ಇದ್ದರು.
ಡಾ. ಬಾಬುರಾವ್​ ಶೇಗುಣಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಗೌಡರ ನಿರೂಪಿಸಿದರು. ರೇವಯ್ಯ ಹಿರೇಮಠ ಹಾಗೂ ಡಾ. ಶಿವಾಜಿ ಜಾಧವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net