ಚೇತನ್ ಪಬ್ಲಿಕ್ ಸ್ಕೂಲ್ ಗೆ ಸಿಫೋರ್ ಪ್ರಶಸ್ತಿ

IMG_20250913_202516_653.jpg
Published on

ಹುಬ್ಬಳ್ಳಿ: ಪ್ರತಿಷ್ಟಿತ ಸಿಫೋರ್ ಸಂಸ್ಥೆಯು ಉತ್ತಮ ಪಠ್ಯ, ಪತ್ಯೇತರ, ಶಿಕ್ಷಣ, ಆಡಳಿತ ಮಂಡಳಿಯ ಕಾರ್ಯಗಳು, ಮಕ್ಕಳಿಗೆ ಕಲಿಸುತ್ತಿರುವ ವಿಧಾನಗಳು ಸೇರಿ ಹಲವಾರು ವಿಷಯಗಳನ್ನು ಪರಿಗಣಿಸಿ ನೀಡುವ ಶ್ರೇಣಿಯಲ್ಲಿ ಇಲ್ಲಿಯ ಚೇತನ್ ಪಬ್ಲಿಕ್ ಸಿಬಿಎಸ್ಇ ಶಾಲೆಯು ಸ್ಥಾನ ಪಡೆದಿದೆ.

ಜಿಲ್ಲಾವಾರು ಶಾಲೆಗಳ ರ್ಯಾಂಕಿಂಗ್ ನಲ್ಲಿ ಅತ್ಯುತ್ತಮ ಶಾಲೆ ಎಂದು ಘೋಷಿಸಲ್ಪಟ್ಟಿರುವ ಚೇತನ್ ಶಾಲೆಗೆ ನವದೆಹಲಿಯಲ್ಲಿ ಜರುಗಿದ ಸಮಾರಂಭದಲ್ಲಿ ನಿರ್ದೇಶಕಿ ಸೌಮ್ಯ ವಳಸಂಗ ಹಾಗೂ ಪ್ರಾಂಶುಪಾಲರಾದ ಡಾ. ಜೆರುಷಾ ನಡುಗಡ್ಡಿ ಅವರಿಗೆ ಪ್ರಶಸ್ತಿ ಹಾಗೂ ಫಲಕ ನೀಡಿ ಗೌರವಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net