ಗಣಿತ ಪ್ರತಿಭೆ ಗುರುತಿಸಲು ಸಿಎಫ್‌ಎಎಲ್ ರಾಮಾನುಜನ್ ಸ್ಪರ್ಧೆ; ನೋಂದಣಿಗೆ ಜೂ.21 ಕೊನೆಯ ದಿನ, 23 ಕ್ಕೆ ಪ್ರಥಮ ಪರೀಕ್ಷೆ

mng- june 14- CFAL Logo
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಶಾಲಾ ಮಕ್ಕಳಲ್ಲಿ ಗಣಿತ ಪ್ರತಿಭೆಯನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ಸೆಂಟರ್ ಫಾರ್ ಅಡ್ವಾನ್ಸ್‌ಡ್ ಲರ್ನಿಂಗ್ (ಸಿಎಫ್‌ಎಎಲ್) ವತಿಯಿಂದ ಆಯೋಜಿಸಿರುವ ‘ರಾಮಾನುಜನ್ ಸ್ಪರ್ಧೆ 2024’ ಯಲ್ಲಿ ಏಳು ಪರೀಕ್ಷೆಗಳು ನಡೆಯಲಿದ್ದು, ಪ್ರಥಮ ಪರೀಕ್ಷೆ ಜೂನ್ 23 ರಂದು ಏರ್ಪಡಿಸಲಾಗಿದೆ. ಮುಂಬರುವ ಉಳಿದ ಪರೀಕ್ಷೆಗಳು ಪ್ರತಿ ತಿಂಗಳು ಮೂರನೇ ಭಾನುವಾರ ಸಿಎಫ್‌ಎಎಲ್ ಮಂಗಳೂರು ಬಿಜೈ ಕ್ಯಾಂಪಸ್‌ನಲ್ಲಿ ಜರುಗಲಿದೆ.

  • ಏಳರಿಂದ 10 ನೇ ತರಗತಿ ತನಕದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆಯು ಒಗಟು ಮತ್ತು ಸಮಸ್ಯೆಗಳೊಂದಿಗೆ ಯುವ ಮನಸ್ಸುಗಳು ಪ್ರಾಮಾಣಿತ ಶಾಲಾ ಪಠ್ಯಕ್ರಮ ಮೀರಿ ಸವಾಲುಗಳನ್ನು ಎದುರಿಸುವ ಕೌಶಲ ಸಂಪಾದನೆಗೆ ಪ್ರೇರೇಪಿಸುವ ಗುರಿಯನ್ನು ಹೊಂದಿದೆ ಎಂದು ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮೊರಾಸ್ ಅವರು ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  • ಎರಡು ಗಂಟೆಗಳ ಅವಧಿಯನ್ನು ಹೊಂದಿರುವ ಪ್ರತಿ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಚಿಂತನೆ- ಪ್ರಚೋದಕ ಮತ್ತು ಸವಾಲಿನ ಒಗಟುಗಳೊಂದಿಗೆ ಸವಾಲು ಹಾಕುತ್ತದೆ. ಸರ್ಕಾರಿ ಶಾಲೆ ಮಕ್ಕಳಿಗೆ ನೋಂದಣಿ ಪೂರ್ಣ ಉಚಿತವಾಗಿರುತ್ತದೆ. ಏಳು ಪರೀಕ್ಷೆಗಳಲ್ಲಿ 5 ರಲ್ಲಿ ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕ ಮರುಪಾವತಿಸಲಾಗುವುದು. ಪ್ರಶಸ್ತಿ ಗೆದ್ದ ಸರ್ಕಾರಿ ಶಾಲೆ ಐವರು ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ ಮೌಲ್ಯದ ಪುಸ್ತಕಗಳು ಬಹುಮಾನವಾಗಿ ನೀಡಲಾಗುವುದು ಎಂದು ಅವರು ಹೇಳಿದರು.
  • ವಿದ್ಯಾರ್ಥಿಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಎಂದರೆ ಕಡಿಮೆ ಗಮನ ನೀಡುವುದು. ದಿನಗಟ್ಟಲೆಪ್ರಶ್ನೆಗಳೊಂದಿಗೆ ಕುಳಿತುಕೊಳ್ಳುವುದು ಮತ್ತು ಅದರ ಬಗ್ಗೆ ಯೋಚಿಸುವುದು ವಿದ್ಯಾರ್ಥಿಗಳು ಉತ್ತಮ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳಾಗಿ ಬೆಳೆಯಲು ಅಭಿವೃದ್ಧಿಪಡಿಸಿಕೊಳ್ಳಬೇಕಾದ ಕೌಶಲವಾಗಿದೆ. ಈ ಕೌಶಲ ಕುರಿತು ವಿದ್ಯಾರ್ಥಿಗಳ ಗಮನ ಸೆಳೆಯಲು ರಾಮಾನುಜನ್ ಸ್ಪರ್ಧೆ ಪರಚಯಿಸಲಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಎನ್‌ಎಂಟಿಸಿ, ವಿವಿಎಂ, ಪಿಆರ್‌ಎಂಓ ಮತ್ತು ಆರ್‌ಎಂಓ ನಂತಹ ರಾಷ್ಟ್ರೀಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಉಪ ಪ್ರಾಂಶುಪಾಲ ಗೌರೀಶ್‌ರಾಜ್ ವಿವರಿಸಿದರು.
  • ಜೆಇಇ ಅಡ್ವಾನ್ಸ್‌ಡ್ 2024 ಪರೀಕ್ಷೆಯಲ್ಲಿ ಮಂಗಳೂರಿನ ಸಿಎಫ್‌ಎಎಲ್ ಶಿಕ್ಷಣ ಸಂಸ್ಥೆಯ 32 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಯಾಂಕಗಳನ್ನು ಸಾಧಿಸಿದ್ದಾರೆ ಎಂದು ಅವರು ತಿಳಿಸದರು.
  • ಗಣಿತದಲ್ಲಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿರುವ ಶ್ರೀನಿವಾಸ ರಾಮಾನುಜನ್ ಹೆಸರಿನಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಠಿಠಿ://್ಛಟ್ಟಞ.ಜ್ಝಛಿ/ಜಿ6್ಕ64ಠ್ಠಿಖ8ಓ್ಠಕ್ಚಿಡಿಎ6 ಲಿಂಕ್‌ನಲ್ಲಿ ಜೂನ್ 21 ಒಳಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು.
  • ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಕ್ರಿಸ್ ಕ್ರಾಸ್ತ, ಹಿರಿಯ ಗಣಿತ ಉಪನ್ಯಾಸಕ ರಾಘವೇಂದ್ರ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net