ಸಿಇಟಿಯಲ್ಲಿ ಉಡುಪಿಗೆ 7, ದಕ್ಷಿಣ ಕನ್ನಡಕ್ಕೆ 3 ರ‌್ಯಾಂಕ್

300720 Raichur CET Exam
ರಾಯಚೂರಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.
Published on

ಮಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಬ್ಯಾಚುಲರ್ ಆಫ್ ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್ ನ ಮೊದಲ ಒಂಬತ್ತು ರ‌್ಯಾಂಕುಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ತಲಾ ಎರಡು ರ‌್ಕಾಂಕುಗಳನ್ನು ಪಡೆದಿವೆ.

ಮಣಿಪಾಲ ಮಾಧವ ಕೃಪಾ ಆಂಗ್ಲ ಮಾಧ್ಯಮ ಸ್ಕೂಲ್‌ನ ವ್ರಜೇಶ್ ವೀಣಾಧರ ಶೆಟ್ಟಿ ದ್ವಿತೀಯ ಹಾಗೂ ವಿಶ್ರಾನ್ ವೀಣಾಧರ ಶೆಟ್ಟಿ ಐದನೇ ರ‌್ಯಾಂಕ್, ಮಂಗಳೂರು ಎಕ್ಸ್‌ರ್ಟ್ ಪಿಯು ಕಾಲೇಜಿನ ಆದಿತ್ಯ ಕಾಮತ್ ಮತ್ತು ಆಳ್ವಾಸ್ ಮೂಡಬಿದಿರೆ ಕಾಲೇಜಿನ ಮನೋಜ್ ಎನ್ ಎಂಟನೇ ರ‌್ಯಾಂಕ್ ಪಡೆದಿದ್ದಾರೆ.

ಅಗ್ರಿಕಲ್ಚರಲ್ ವಿಭಾಗದಲ್ಲಿ ಮೊದಲ ಒಂಬತ್ತು ರ‌್ಯಾಂಕುಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ತಲಾ ಒಂದು ರ‌್ಯಾಂಕು ಪಡೆದಿವೆ. ಆಳ್ವಾಸ್ ಕಾಲೇಜು ಮುಡಬಿದಿರೆಯ ಮನೋಜ್ ಎನ್ ಐದನೇ ಮತ್ತು ಮಣಿಪಾಲ ಮಾಧವ ಕೃಪಾ ಆಂಗ್ಲ ಮಾಧ್ಯಮ ಸ್ಕೂಲ್‌ನ ವ್ರಜೇಶ್ ವೀಣಾಧರ ಶೆಟ್ಟಿ ಒಂಬತ್ತನೇ ರ‌್ಯಾಂಕ್ ಪಡೆದಿದಾರೆ.

ವೆಟರ್ನರಿ ವಿಭಾಗದಲ್ಲಿ ಮಾಧವ ಕೃಪಾ ಆಂಗ್ಲ ಮಾಧ್ಯಮ ಸ್ಕೂಲ್‌ನ ವ್ರಿಶಾನ್ ವೀಣಾಧರ ಶೆಟ್ಟಿ 5ನೇ ರ‌್ಯಾಂಕು ಮತ್ತು ವ್ರಜೇಶ್ ವೀಣಾಧರ ಶೆಟ್ಟಿ ಆರನೇ ರ‌್ಯಾಂಕ್ ಪಡೆದಿದ್ದಾರೆ. ಬಿಫಾರ್ಮ ವಿಭಾಗದ ಮೊದಲ ಒಂಬತ್ತು ರ‌್ಯಾಂಕುಗಳಲ್ಲಿ ಉಡುಪಿ ಎರಡು ರ‌್ಯಾಂಕುಗಳನ್ನು ಪಡೆದಿವೆ. ವ್ರಜೇಶ್ ವೀಣಾಧರ ಶೆಟ್ಟಿ ಏಳನೇ ಮತ್ತು ವ್ರಿಶಾನ್ ವೀಣಾಧರ ಶೆಟ್ಟಿ ಎಂಟನೇ ರ‌್ಯಾಂಕ್ ಪಡೆದಿದ್ದಾರೆ.

ರ‌್ಯಾಂಕ್ ಬಾಚಿಕೊಂಡ ಉಡುಪಿ ಜಿಲ್ಲೆಯ ವ್ರಜೇಶ್ ಮತ್ತು ವಿಶ್ರಾನ್ ವೀಣಾಧರ ಶೆಟ್ಟಿ ಸೋದರರು ಎಂಬುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net