

ಬೆಂಗಳೂರು: ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್ ಸೀಟುಗಳ ಭರ್ತಿಗೆ ನಡೆಸಿದ 2020ನೇ ಸಾಲಿನ ಕಾಮೆಡ್-ಕೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದ ಬೆಂಗಳೂರಿನ ಎಂ.ರಕ್ಷಿತ್ ಕಾಮೆಡ್-ಕೆನಲ್ಲೂ ಮೊದಲ ರ್ಯಾಂಕ್ ಪಡೆದಿದ್ದಾನೆ.
ರಕ್ಷಿತ್ 180ಕ್ಕೆ 168 ಅಂಕ ಗಳಿಸಿದ್ದಾನೆ. ರಾಜಸ್ಥಾನದ ಸೌರವ್ ಕುಮಾರ್, ಬಿಹಾರದ ಅನುಪಮಾ ಸಿನ್ಹಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ರ್ಯಾಂಕ್ ಗಳಿಸಿದ್ದಾರೆ. ಟಾಪ್-10 ರ್ಯಾಂಕ್ನಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳಿದ್ದು, ಶಾದನ್ ಹುಸೇನ್ 7ನೇ ರ್ಯಾಂಕ್ ಪಡೆದಿದ್ದಾರೆ. ಮೊದಲ 100 ರ್ಯಾಂಕ್ಗಳ ಪೈಕಿ 45 ರ್ಯಾಂಕ್ಗಳು ಕರ್ನಾಟಕದ ವಿದ್ಯಾರ್ಥಿಗಳ ಪಾಲಾಗಿವೆ. ಆ.19ರಂದು ದೇಶಾದ್ಯಂತ 259 ಪರೀಕ್ಷಾ ಕೇಂದ್ರಗಳಲ್ಲಿ ಆಯೋಜಿಸಿದ್ದ ಪರೀಕ್ಷೆಗೆ 43,249 ವಿದ್ಯಾರ್ಥಿಗಳು ಹಾಜರಾಗಿದ್ದರು.
ರ್ಯಾಂಕ್ ಕಾರ್ಡ್: ಅಭ್ಯರ್ಥಿಗಳು ರ್ಯಾಂಕ್ ಕಾರ್ಡನ್ನು ಡಿಡಿಡಿ.ಟಞಛಿಛk.ಟ್ಟಜ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಲಭ್ಯವಿರುವ ಸೀಟುಗಳು ಹಾಗೂ ಕೌನ್ಸೆಲಿಂಗ್ ದಿನಾಂಕವನ್ನು ಶೀಘ್ರದಲ್ಲೇ ವೆಬ್ಸೈಟ್ನಲ್ಲಿ ಪ್ರಕಟಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ನೋಡಬಹುದು. ಕಾಮೆಡ್-ಕೆ ಕೌನ್ಸೆಲಿಂಗ್ ಆನ್ಲೈನ್ನಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ. ಅಭ್ಯರ್ಥಿಗಳು ದಾಖಲೆಗಳನ್ನು ಸ್ಕಾ್ಯನ್ ಮಾಡಿ ಕಾಮೆಡ್-ಕೆ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು.
ರ್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ. ಮೊದಲ ರ್ಯಾಂಕ್ ಪಡೆದಿರುವುದು ತುಂಬಾ ಖುಷಿಯಾಗು ತ್ತಿದೆ. ಸದ್ಯ ಜೆಇಇ ಪರೀಕ್ಷೆ ಬರೆಯುತ್ತಿದ್ದೇನೆ. ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯರಿಂಗ್ ಮಾಡಬೇಕೆಂಬ ಗುರಿ ಹೊಂದಿದ್ದೇನೆ. |ಎಂ.ರಕ್ಷಿತ್ ಆರ್.ವಿ. ಪಿಯು ಕಾಲೇಜು, ಬೆಂಗಳೂರು (ಮೊದಲ ರ್ಯಾಂಕ್) ಜೆಇಇ ಪರೀಕ್ಷೆ ಬರೆಯುತ್ತಿದ್ದೇನೆ. ಐಐಟಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಮಾಡಬೇಕು ಎಂಬ ಆಸೆ ಇದೆ. ಫಲಿತಾಂಶ ಬಂದ ಮೇಲೆ ನಿರ್ಧಾರ ಮಾಡುತ್ತೇನೆ. | ಶಾದನ್ ಹುಸೇನ್ 7ನೇ ರ್ಯಾಂಕ್, ಕಾಮೆಡ್-ಕೆ