ಶೀಘ್ರದಲ್ಲೇ ಸಿಇಟಿ ಕೌನ್ಸೆಲಿಂಗ್: ಡಿಸಿಎಂ

_DSC1273
Published on

ಬೆಂಗಳೂರು : ವಿದ್ಯಾರ್ಥಿಗಳು ಮತ್ತು ಪಾಲಕರು ಹೆಚ್ಚು ದಿನ ಕಾಯುವ ಅವಶ್ಯಕತೆ ಇಲ್ಲ ಶೀಘ್ರವೇ ಸಿಇಟಿ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಮಹಾರಾಣಿ ಕಾಲೇಜಿನ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೌನ್ಸೆಲಿಂಗ್ ಮುಕ್ತಾಯವಾಗಬೇಕಿತ್ತು. ಕರೊನಾ ಕಾರಣದಿಂದ ತಡವಾಯಿತು. ಆದಷ್ಟು ಬೇಗ ದಿನಾಂಕ ಪ್ರಕಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net