

ಧಾರವಾಡ: ಇಂಜಿನಿಯರಿ೦ಗ್ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನಗರದ ಎಸ್‌ಡಿಎಂ ಇಂಜಿನಿಯರಿAಗ್ ಕಾಲೇಜಿನಲ್ಲಿ ಮಂಗಳವಾರ ಸಿಇಟಿ ಕೌನ್ಸೆಲಿಂಗ್ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಎಸ್‌ಡಿಎಂ ಸಂಸ್ಥೆಯ ಕಾರ್ಯದರ್ಶಿ ಜೀವಂಧರ್ ಕುಮಾರ ಕಾರ್ಯಾಗಾರದ ಉದ್ದೇಶವನ್ನು ವಿವರಿಸಿದರು. ಪ್ರೊ. ಶ್ರವಣಕುಮಾರ್ ಕಾಮೆಡ್ ಕೆ ಸೀಟು ಆಯ್ಕೆ ವೇಳೆ ಅನುಸರಿಸಬೇಕಾದ ಹಂತಗಳನ್ನು ತಿಳಿಸಿದರು. ಕೆಇಎ ನಿವೃತ್ತ ನೋಡಲ್ ಅಽಕಾರಿ ಎಸ್.ಜಿ. ಗಿರಿಮಠ ಕೆ ಸಿಇಟಿಯ ಆನ್‌ಲೈನ್ ಕೌನ್ಸೆಲಿಂಗ್ ವೇಳೆ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.
ಪ್ರಾಚಾರ್ಯ ಡಾ. ಆರ್.ಎಲ್. ಚಕ್ರಸಾಲಿ, ಪ್ರೊ. ಕೇಶವ ಜೋಶಿ, ಪ್ರೊ. ಎಸ್.ವಿ. ವಿರಕ್ತಮಠ, ಇತರರಿದ್ದರು. ಕಾರ್ಯಾಗಾರದಲ್ಲಿ 350 ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ಪ್ರೊ. ಸಂಜೀತ ಅಮ್ಮಿನಭಾವಿ ನಿರೂಪಿಸಿದರು.