

ಮಂಡ್ಯ: ಜಿಲ್ಲೆಯ ಐಪಿ ಫೀಡರ್‌ಗಳಿಗೆ ಪ್ರಸ್ತುತ 2 ಪಾಳಿಯಲ್ಲಿ 3 ಬ್ಯಾಚ್‌ಗಳಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
1ನೇ ಪಾಳಿಗೆ ಸಂಬಂಧಿಸಿದಂತೆ ಹಗಲಿನಲ್ಲಿ 5 ಗಂಟೆಯಿಂದ ಸಂಜೆ 5 ರವರೆಗೆ, 2ನೇ ಪಾಳಿ-ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ರವರೆಗೆ ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಸರಬರಾಜಿನ ಅವಧಿಯನ್ನು ಪರಿಷ್ಕರಿಸಲಾಗಿದೆ.
ಅದರಂತೆ 1ನೇ ಪಾಳಿ ಮಧ್ಯರಾತ್ರಿಯಿಂದ 5ಗಂಟೆವರೆಗೆ, 2ನೇ ಪಾಳಿ ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಲು ಉಪ ಕೇಂದ್ರಗಳಲ್ಲಿ ಸಾಮರ್ಥ್ಯವಿರುವ ಗ್ರಾಮಗಳಿಗೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಪರಿಷ್ಕೃತ ಅವಧಿಯಂತೆ ವಿದ್ಯುತ್ ಸರಬರಾಜು ಮಾಡಲು ಅವಶ್ಯವಿರುವ ಹೊಸ ವಿದ್ಯುತ್ ಸರಬರಾಜು ಕೇಂದ್ರ ಮತ್ತು ಟ್ರಾನ್ಸ್ ಮಿಷನ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಸ್ಥಳೀಯ ವಾಟ್ಸಾಪ್ ಗುಂಪುಗಳಲ್ಲಿ ರೈತರಿಗೆ ಪರಿಷ್ಕೃತ ಸಮಯದ ಮಾಹಿತಿ ನೀಡಲಾಗುವುದು ಎಂದು ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.