

ಕೆ.ಆರ್.ಪೇಟೆ: ಸೆಸ್ಕ್‌ನ ಕೆ.ಆರ್.ಪೇಟೆ ವಿಭಾಗೀಯ ವ್ಯಾಪ್ತಿಯ ಜನಸಂಪರ್ಕ ಸಭೆ ಜೂ.17ರಂದು ಬೆಳಗ್ಗೆ 11 ಗಂಟೆಗೆ ವಿಭಾಗೀಯ ಕಚೇರಿ ಆವರಣದಲ್ಲಿ ಅಧೀಕ್ಷಕ ಇಂಜಿನಿಯರ್ ನೇತೃತ್ವದಲ್ಲಿ ನಡೆಯಲಿದೆ. ವಿಭಾಗ ವ್ಯಾಪ್ತಿಯ ಉಪವಿಭಾಗ 1 ಮತ್ತು 2ರ ವ್ಯಾಪ್ತಿಯ ಎಲ್ಲ ಗ್ರಾಹಕರು, ಜನಪ್ರತಿನಿಧಿಗಳು, ರೈತ ಸಂಘದ ಮುಖಂಡರು ಮೊದಲನೇ ತ್ರೈಮಾಸಿಕ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಯನ್ನು ಪರಿಹರಿಸಿಕೊಳ್ಳುವಂತೆ ಇಇ ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.