

ಸುಳ್ಯ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ರೋಟರಿ ಕ್ಲಬ್ ಸುಳ್ಯ ಹಾಗೂ ಸುಳ್ಯ ಸ್ತ್ರೀಶಕ್ತಿಬ್ಲಾಕ್ ಸೊಸೈಟಿ ಸಹಯೋಗದಲ್ಲಿ ಸ್ತನ್ಯಪಾನದ ಮಹತ್ವ ಹಾಗೂ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಮಾಹಿತಿ ಕಾರ್ಯಕ್ರಮ ನಗರದ ಸ್ತ್ರೀ ಶಕ್ತಿ ಭವನ ಸುಳ್ಯದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸ್ತ್ರೀರೋಗ ಮತ್ತು ಪ್ರಸೂತಿರೋಗ ವಿಭಾಗ ಮುಖ್ಯಸ್ಥೆ ಡಾ.ಗೀತಾ ದೊಪ್ಪ ಮಾಹಿತಿ ನೀಡಿದರು. ಪ್ರಭಾರ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತ ಗೋಪಿನಾಥ್, ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ್, ಕಮ್ಯುನಿಟಿ ಸರ್ವೀಸ್ ಡೈರೆಕ್ಟರ್ ಸನತ್ ಪಿ.ಆರ್. ಮತ್ತು ವೆಬ್ ಕೋಆರ್ಡಿನೇಟರ್ ಸತೀಶ್ ಕೆ.ಜಿ.ಉಪಸ್ಥಿತರಿದ್ದರು.