

ಹುಬ್ಬಳ್ಳಿ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಕೆಎಲ್‌ಇ ತಾಂತ್ರಿಕ ವಿವಿಯ ಸಿವಿಲ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗಗಳ ಸಹಯೋಗದೊಂದಿಗೆ ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಿದ್ದ ಮೇಲ್ಚಾವಣಿ ಸೌರ ವಿದ್ಯುತ್ ಶಕ್ತಿಯ ವಾಣಿಜ್ಯೋದ್ಯಮ ಅಭಿವೃದ್ಧಿ ಕಾರ್ಯಾಗಾರ ಭಾನುವಾರ ಸಂಪನ್ನಗೊಂಡಿತು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್. ಪಾಟಿಲ ಅಧ್ಯಕ್ಷತೆ ವಹಿಸಿದ್ದರು. ಮಹಾತ್ಮ ಗಾಂಧಿ ಗ್ರಾಮಿಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಸೋಲಾರ್ ವಿಭಾಗದ ಮುಖ್ಯಸ್ಥ ಸಂತೊಷ ಕುಮಾರ ಕಾರ್ಯಾಗಾರದ ವರದಿ ಮಂಡಿಸಿದರು. ಈ ಕಾರ್ಯದಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದ ಐವತ್ತು ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಜಿ.ಯು. ರಾಜು, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಮುಖ್ಯಸ್ಥ ಡಾ. ಗುರುನಾಥ ಕಂಪ್ಲಿ, ಪ್ರೊ.ವಿ.ಎನ್. ಸನಗೌಡರ, ಪ್ರೊ. ಪಂಡಿತಾರಾಧ್ಯ ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಯೊಜಕ ಪ್ರೊ.ಪಿ.ಪಿ. ರೇವಣಕರ ವಂದಿಸಿದರು.