

ಬೈಂದೂರು: ಉಪ್ಪುಂದ ಗ್ರಾಮ ಪಂಚಾಯಿತಿನಲ್ಲಿ 2025-26ನೇ ಸಾಲಿನ ಸಾವಿರ ಗ್ರಾಮ ಪಂಚಾಯಿತಿ ಸಾಕ್ಷರತಾ ಕಾರ್ಯಕ್ರಮ ನವ ಸಾಕ್ಷರಿಗೆ ಶುಕ್ರವಾರ ಪ್ರವಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನಚಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭೋಧಕರಿಗೆ ಸನ್ಮಾನ ವಾಡಿ, ಸಾಕ್ಷರತಾ ಬಗ್ಗೆ ವಾಹಿತಿ ನೀಡಲಾಯಿತು ಮತ್ತು ನವಸಾಕ್ಷರರಿಗೆ ಪ್ರವಾಣ ಪತ್ರ ವಿತರಿಸಿ ಹಣ್ಣಿನ ಗಿಡಗಳನ್ನು ನೀಡಲಾಯಿತು.
ಕೆಲವು ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ವಾಹಿತಿ ನೀಡಲಾಯಿತು. ನಮ್ಮ ಭೂಮಿ ಆಶಾ, ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ವಾಡಿದ ಕುರಿತು ತಿಳಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮೀ ಗಾಣಿಗ, ಆಶಾ ಕಾರ್ಯಕರ್ತೆಯರು, ಎಸ್‌ಎಲ್‌ಆರ್‌ಎಂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆಯ ಬಿ.ಆರ್.ಪಿ ರಾಮಕೃಷ್ಣ ಪ್ರಾಸ್ತಾವಿಸಿದರು. ಎಸ್‌ಎಲ್‌ಆರ್‌ಎಂ ಮೇಲ್ವಿಚಾರಕಿ ಜಾನಕಿ ವಂದಿಸಿದರು. ಆಶಾ ಕಾರ್ಯಕರ್ತೆ ಪ್ರಕಾಶಿನಿ ನಿರೂಪಿಸಿದರು.