

ಬೈಂದೂರು: ಕ್ರೀಡಾ ಚಟುವಟಿಕೆ ಕಲಿಕೆಗೆ ಪೂರಕ. ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆ ಮುಖ್ಯ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹೇಳಿದರು.
ಕೊಲ್ಲೂರು ದೇವಳದ ಅರೆಶಿರೂರು ಪ್ರೌಢಶಾಲೆಯ 2024-25ನೇ ಸಾಲಿನ ವಾರ್ಷಿಕ ಕ್ರೀಡೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋಳಿಹೊಳೆ ಗ್ರಾಪಂ ಅಧ್ಯಕ್ಷ ವಸಂತ ಹೆಗ್ಡೆ ಧ್ವಜಾರೋಹಣಗೈದರು. ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಲಿಂಗ ವೆಂಕ ನಾಯ್ಕ ಕ್ರೀಡಾಜ್ಯೋತಿ ಹಾಗೂ ಧನಾಕ್ಷಿ ವಿಶ್ವನಾಥ ಹಾಗೂ ಸುಧಾ ಕೆ. ಕ್ರೀಡೋತ್ಸವ ಉದ್ಘಾಟಿಸಿದರು.
ಗೋಳಿಹೊಳೆ ಗ್ರಾಪಂ ಉಪಾಧ್ಯಕ್ಷೆ ಇಂದಿರಾ, ಸದಸ್ಯರಾದ ಶ್ರೀಕಾಂತ ಪೂಜಾರಿ, ಮಂಜುನಾಥ ಮರಾಠಿ, ಶೇಖರ ನಾಯ್ಕ, ಬೈಂದೂರು ಪೊಲೀಸ್ ಠಾಣಾಧಿಕಾರಿ ನವೀನ್ ಬೋರ್ಕರ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಪಾಧ್ಯಕ್ಷ ರವಿಶಂಕರ ಹೆಗ್ಡೆ, ದೇವಳದ ಬೀಸಿನಪಾರೆ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎ.ಶಿವರಾಮ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ವಂದಿಸಿದರು. ಶಿಕ್ಷಕರಾದ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿ, ಗೀತಾ ಎಚ್., ಭಾಸ್ಕರ್ ಭಟ್, ಗೋವಿಂದ ಗೊಂಡ, ಪ್ರಶಾಂತ ಶ್ಯಾನುಭಾಗ್, ಆಶಾಲತಾ ವಿವಿಧ ಚಟುವಟಿಕೆ ನಿರ್ವಹಿಸಿದರು.