

ಹುಬ್ಬಳ್ಳಿ: ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದ ಬಹಳಷ್ಟು ಜನರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಆರೋಗ್ಯ ವರ್ಧನೆಗೆ ಹಾಗೂ ರೈತರ ಸಬಲೀಕರಣಕ್ಕೆ ಸಿರಿಧಾನ್ಯಗಳ ಪಾತ್ರ ಹಿರಿದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಣ್ಣ ಕೊರವಿ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ಸಿರಿ ಮಿಲೆಟ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೂ ಟ್ಯೂಬರ್ ಸಚಿನ್ ಶೆಟ್ಟಿ ನೇತೃತ್ವದ ತಂಡ 16 ರಾಜ್ಯಗಳಲ್ಲಿ ಸಿರಿ ಧಾನ್ಯ ಅಭಿಯಾನ ನಡೆಸಿ ಬೈಕ್ ರ‍್ಯಾಲಿ ಮೂಲಕ ಹುಬ್ಬಳ್ಳಿಗೆ ಆಗಮಿಸಿತು. ಈ ವೇಳೆ ಸಿರಿ ಧಾನ್ಯದ ಮಹತ್ವವನ್ನು ತಂಡ ಹಂಚಿಕೊಂಡಿತು.
ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಶಾನ, ಸಿರಿ ಮಿಲೆಟ್ ನಿರ್ದೇಶಕ ದಿನೇಶ ಎಂ., ಚಂದ್ರಶೇಖರ ಶೆಟ್ಟಿ, ಪ್ರದೀಪ ಶೆಟ್ಟಿ, ಸೂರಜ್, ಶ್ಶಾಮ ಪ್ರಸಾದ್ ಕಾಮತ್, ಶೈನಿ ಕಾಮತ್ ಇತರರು ಇದ್ದರು.