

ಹುಮನಾಬಾದ್: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಮಂಗಳವಾರ ದಿಢೀರ್ ಭೇಟಿ ನೀಡಿ ಐಸಿಯು, ಒಳರೋಗಿಗಳ ಕೋಣೆ, ಡಯಾಲಿಸಿಸ್ ಕೇಂದ್ರ ಸೇರಿ ಎಲ್ಲ ವಾರ್ಡ್ಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು.
ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗಬಾರದು. ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆಯಾಗಬೇಕು. ಮಳೆಗಾಲ ಆಗಿರುವುದರಿಂದ ಡೆಂಘೆ, ಚಿಕೂನ್‌ಗುನ್ಯಾ, ಮಲೇರಿಯ ಅಂತಹ ಸಾಂಕ್ರಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮುನ್ನೆಚ್ಚರಿಕೆ ವಹಿಸಬೇಕು. ಆಸ್ಪತ್ರೆಯಲ್ಲಿಯೂ ಸೂಕ್ತ ಚಿಕಿತ್ಸೆ ಒದಗಿಸಬೇಕೆಂದು ವೈದ್ಯರಿಗೆ ಸೂಚಿಸಿದರು.
ಡಿಎಚ್‌ಒ ಡಾ.ಧ್ಯಾನೇಶ್ವರ ನಿರಗುಡೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ ಡೊಂಗರೆ, ಟಿಎಚ್ ಡಾ.ಶಿವಕುಮಾರ ಸಿದ್ದೇಶ್ವರ, ಹಿರಿಯ ತಜ್ಞ ವೈದ್ಯ ಡಾ.ಬಸವಂತರಾವ ಗುಮ್ಮೆದ, ಸಿಎಂಒ ಡಾ.ಬಾಕರ್ ಜಾನಿ, ತಾಪಂ ಇಒ ದಿಪೀಕಾ ನಾಯ್ಕರ ಇತರರಿದ್ದರು.
ಹಳ್ಳಿಖೇಡ (ಕೆ), ಜಲಸಂಗಿ, ಮುಸ್ತಪುರ ವಾಡಿ ಗ್ರಾಮಕ್ಕೂ ಭೇಟಿ ನೀಡಿ ಉದ್ಯೋಗ ಖಾತ್ರಿ ಸೇರಿ ಇನ್ನಿತರ ಯೋಜನೆಗಳ ಕಾಮಗಾರಿಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು.