

ನರಗುಂದ: ಜಿಪಂ ಸಿಇಒ ಭರತ್ ಎಸ್. ಅವರು ತಾಲೂಕಿನ ಹುಣಶೀಕಟ್ಟಿ, ಕೊಣ್ಣೂರು ಮತ್ತು ಶಿರೋಳ ಗ್ರಾಪಂಗಳಿಗೆ ಭೇಟಿ ನರೇಗಾ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರು.
ಹುಣಶೀಕಟ್ಟಿ ಗ್ರಾಪಂ ವ್ಯಾಪ್ತಿಯ ಕಲಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1.33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಶೌಚಗೃಹ ಕಾಮಗಾರಿ, ಕೊಣ್ಣೂರು ಗ್ರಾಪಂನಲ್ಲಿ ನಿರ್ಮಿಸಲಾದ ಗಟಾರ ಮತ್ತು ಸಿ.ಸಿ.ರಸ್ತೆ ಕಾಮಗಾರಿ ಪರಿಶೀಲಿಸಿದರು.
ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಜತೆ ಸಮಾಲೋಚನೆ ನಡೆಸಿ ಸೌಲಭ್ಯ ಕುರಿತು ಮಾಹಿತಿ ಪಡೆದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪಂಕಜಾ ಮೈತ್ರಿಯವರಿಂದ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ಡೆಲಿವರಿ ಪ್ರಕರಣಗಳ ಸಂಖ್ಯೆ ಬಗ್ಗೆ ಮಾಹಿತಿ ಪಡೆದರು. ಔಷಧ ಉಗ್ರಾಣಕ್ಕೆ ಭೇಟಿ ನೀಡಿ ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದರು.
ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ವಸತಿ ಕೊಠಡಿ ಮತ್ತು ಅಡುಗೆ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಮಕ್ಕಳ ಜತೆ ಬಿಸಿಯೂಟ ಸವಿದು ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಆಹಾರದ ಗುಣಮಟ್ಟದ ಮಾಹಿತಿ ಪಡೆದರು. ಬಳಿಕ ಅಂಗನವಾಡಿ ಕೇಂದ್ರಕ್ಕೆ ಭೇಟಿ ಪುಟ್ಟ ಮಕ್ಕಳನ್ನು ಮಾತನಾಡಿಸಿ ಆಹಾರ ಸಾಮಾಗ್ರಿಗಳ ಬಗ್ಗೆ ಮಾಹಿತಿ ಪಡೆದರು.
ಬಿಇಒ ಡಾ.ಗುರುನಾಥ ಹೂಗಾರ, ಇಒ ಎಸ್.ಕೆ. ಇನಾಮದಾರ್, ಸಂತೋಷಕುಮಾರ ಪಾಟೀಲ, ವೈ.ಬಿ. ಸಂಕನಗೌಡರ, ನಿಂಗಪ್ಪ ಬೇವಿನಗಿಡದ, ಮಂಜುನಾಥ ಗಣಿ, ವಿ.ಆರ್. ರಾಯನಗೌಡರ, ಹನಮಂತ ಡಂಬಳ, ಸುರೇಶ ಬಾಳಿಕಾಯಿ, ಅಲ್ತಾಫ್ ಅಮ್ಮಿನಬಾವಿ, ಮಲ್ಲಪ್ಪ ಕಟ್ಟಮನಿ, ಹುಚ್ಚಪ್ಪ ಕಟ್ಟಿ ಇತರರಿದ್ದರು.