ಇಲಾಖೆ ಪ್ರಗತಿ ಪರಿಶೀಲಿಸಿದ ಸಿಇಓ ರಿಷಿ

Lokayukta Justice B.S. Patil's tour
ಹಣಮಾಪುರದಲ್ಲಿ ಯರೋಗ ಪತ್ತೆ ಆಂದೋಲನ ನಡೆಯಿತು. ಆರ್​.ಎಂ. ಗೌಡರ, ಅಲ್ಲಮಪ್ರಭು ಕಾಪಸೆ, ಎಲ್​.ಎಲ್​. ಕಟಗಿ, ಎಂ. ಎಸ್​. ಕೊಲ್ಹಾರ, ಜಗದೀಶ ಬಿ., ಎಸ್​.ಎಚ್​.ಬಿಂಗಿ, ಸವಿತಾ ದೊಡ್ಡಮನಿ ಇದ್ದರು
Published on

ವಿಜಯಪುರ: ನಗರದ ಜಿಪಂ ಸಭಾಭವನದಲ್ಲಿ ಶುಕ್ರವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ನಡೆಯಿತು.

ಜಿಪಂ ಸಿಇಒ ರಿಷಿ ಆನಂದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ತಂಡದ ನಾಯಕ (ಪಿಎಂಸಿ) ಹಾಗೂ ಜಲಧಾರೆ ಯೋಜನೆಯ ಗುತ್ತಿಗೆದಾರರು ಉಪಸ್ಥಿತರರಿದ್ದರು.

ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಜಲಧಾರೆ ಯೋಜನೆಯನ್ನು ರಾಜ್ಯ ಸರ್ಕಾರದಿಂದ ಮೊದಲ ಹಂತದಲ್ಲಿಯೇ ಅನುಮೋದನೆ ನೀಡಲಾಗಿದೆ. ಅದರ ಉದ್ದೇಶ ಎಲ್ಲ ಗ್ರಾಮೀಣ ಜನವಸತಿಗಳಿಗೆ ಪ್ರತಿ ವ್ಯಕ್ತಿಗೆ ತಲಾ 55 ಲೀಟರ್​ನಂತೆ (ಎಲ್​ಪಿಸಿಡಿ) ಯಂತೆ ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯದ ಹಿನ್ನೀರನ್ನು ಶುದ್ಧಿಕರಿಸಿ ಪೂರೈಸುವುದಾಗಿರುತ್ತದೆ ಎಂದು ರಿಷಿ ಆನಂದ ಹೇಳಿದರು.

ವಿಜಯಪುರ ಜಿಲ್ಲೆಯ ವಿಜಯಪುರ, ಇಂಡಿ ಮತ್ತು ಬಸವನಬಾಗೇವಾಡಿ ತಾಲೂಕಿನ 702 ಜನವಸತಿಗಳ ಹಾಗೂ 5 ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದೆ.

ಹಾಗೂ ಮುದ್ದೇಬಿಹಾಳ ತಾಲೂಕು ಮತ್ತು ಸಿಂದಗಿ ತಾಲೂಕಿನ 343 ಜನವಸತಿಗಳ ಹಾಗೂ 6 ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದ್ದು, ಕಾಮಗಾರಿಯನ್ನು 2025 ರ ಮಾರ್ಚ್​ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಜಿಪಂ ಸಿಇಒ ಸೂಚನೆ ನೀಡಿದರು.

ವಿಜಯಪುರ ಜಿಲ್ಲೆಯ ಜಲ ಜೀವನ ಮಿಷನ್​ ಯೋಜನೆಯಡಿ 1016 ಜನವಸತಿ / ಗ್ರಾಮಗಳಿಗೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಯೋಜನೆಯಡಿ 577 ಕಾಮಗಾರಿಗಳು ಈಗಾಗಲೇ ಪೂರ್ಣವಾಗಿವೆ. ಹಾಗೂ 439 ಕಾಮಗಾರಿಗಳು ಪ್ರಗತಿಯಲ್ಲಿವೆ. ಸದರಿ ಯೋಜನೆಯಡಿ ಒಟ್ಟು 4.64 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳಗಳನ್ನು ನೀಡುವ ಗುರಿ ಹೊಂದಿದ್ದು, ಈಗಾಗಲೇ ಸದರಿ ಯೋಜನೆಯಡಿ ಪೂರ್ಣಗೊಂಡಿರುವ 577 ಕಾಮಗಾರಿಗಳಲ್ಲಿ 3.24 ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲಾಗಿದೆ. ಬಾಕಿ ಉಳಿದ 1.41 ಲಕ್ಷ ಮನೆಗಳಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಎಲ್ಲ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಕಟ್ಟನಿಟ್ಟಾಗಿ ಕ್ರಮ ವಹಿಸಲು ಸೂಚಿಸಿದರು.

ಶುದ್ಧ ಕುಡಿಯುವ ನೀರಿನ ಗುಣಮಟ್ಟ ಪರೀಸಲು ಗ್ರಾಮ/ ತಾಲೂಕು ಮಟ್ಟದ ಟಾಸ್ಕಫೋರ್ಸ್​ ಸಮಿತಿಗಳಿಗೆ ನಿಯಮಿತವಾಗಿ ಸಭೆಗಳನ್ನು ನಡೆಸಿ ಎಲ್ಲ ಜಲಮೂಲ ಹಾಗೂ ಜಲ ಸಂಗ್ರಹಾಲಯಗಳ ಮುಂಗಾರಿನ ನಂತರ ಪರೀಕ್ಷಗೆ ಆದ್ಯತೆ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಮಾದರಿ ಪರೀೆ (ಸ್ಯಾಂಪಲ್​ ಟೆಸ್ಟಿಂಗ್​) ಗಳನ್ನು ನಡೆಸಲು ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಕಟ್ಟನಿಟ್ಟಾಗಿ ಕ್ರಮ ವಹಿಸಲು ತಾಕೀತು ಮಾಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸತೀಶ ಪಾಟೀಲ, ಎಸ್​.ಆರ್​. ರುದ್ರವಾಡಿ, ಆರ್​.ಎಸ್​. ಹಿರೇಗೌಡರ, ಥಾರಾನಾಥ ರಾಠೋಡ, ಎನ್​.ಬಿ. ನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net