

ಕುರುಗೋಡು: ತಾಲೂಕಿನ ದಮ್ಮೂರು ಮತ್ತು ಸಿಂಧಿಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಯನ್ನು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಇತ್ತೀಚೆಗೆ ಪರಿಶೀಲಿಸಿದರು. ನಂತರ ರೋಜಗಾರ್ ದಿನ ಆಚರಿಸಲಾಯಿತು. ಕೆಲಸಕ್ಕೆ ಬಂದವರಿಗೆ ಮಾತ್ರ ಹಾಜರಾತಿ ನೀಡಬೇಕು. ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಅಂಗವಿಕಲರಿಗೆ ನಿಯಮಿತ ಕೆಲಸ ನೀಡಬೇಕು. ನರೇಗಾ ಯೋಜನೆಯಡಿ ಶೇ. 60 ಮಹಿಳೆಯರು ಭಾಗವಹಿಸಬೇಕು ಎಂದು ಜಿಪಂ ಸಿಇಒ ಸೂಚಿಸಿದರು.