ರೋಣ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗೆ ಭೇಟಿ ಕಾಮಗಾರಿ ಪರಿಶೀಲನೆ ನಡೆಸಿದ ಸಿಇಓ

WhatsApp Image 2024-03-19 at 5.01.24 PM
Published on

ರೋಣ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಭರತ್ ಎಸ್ .ಅವರು ಮಗಳವಾರ ರೋಣ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಅಬ್ಬಿಗೇರಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು, ಈ ಸಂದರ್ಭದಲ್ಲಿ ಕಾಮಗಾರಿ ಕಡತಗಳನ್ನ ಹಾಗೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಳತೆ ಪರಿಶೀಲನೆ ನಡೆಸಿದರು. ಹಾಗೂ ಮುಂದಿನ ವರ್ಷಗಳಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಕೂಲಿ ಆಧಾರಿತ ಕಾಮಗಾರಿಯನ್ನು ಎಪ್ರಿಲ್ ತಿಂಗಳಲ್ಲಿ ಪ್ರಾರಂಭಿಸಲು ಸೂಚಿಸಿದರು.

ಸಸಿ ನೆಡುವ ಕಾಮಗಾರಿ ವೀಕ್ಷಣೆ
ಹಿರೇಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಸ್ತೆ ಬದಿ ಸಸಿ ನೆಟ್ಟಿರುವ ಕಾಮಗಾರಿ ವೀಕ್ಷಿಸಿದ ಅವರು ಸರಿಯಾದ ರೀತಿಯಲ್ಲಿ  ಸಸಿ ನೆಡುವುದು ಅವುಗಳನ್ನು ಪೆÇೀಷಣೆ ಮಾಡುವದು ನಿಮ್ಮ ಕರ್ತವ್ಯ. ಯಾವ ಭಾಗದಲ್ಲಿ ಎಷ್ಟು ಸಸಿ ನೆಟ್ಟಿದ್ದಿರಿ, ಈ ವರ್ಷದಲ್ಲಿ ಏನೆಲ್ಲಾ ಪ್ರಗತಿ ಸಾಧಿಸಿದ್ದಿರಿ ಅದನ್ನು ಸಂಪೂರ್ಣ ಮಾಹಿತಿ ನೀಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ರೋಣ ತಾಲೂಕ ಆಸ್ಪತ್ರೆಗೂ ಭೇಟಿ
ರೋಣ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ, ಹೊರ ರೋಗಿಗಳ ವಿಭಾಗ, ಹೆರಿಗೆ ಕೊಠಡಿ ಮತ್ತು ಪುರುಷರ ವಾರ್ಡ್, ಹಾಗೂ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಆಸ್ಪತ್ರೆಯನ್ನು ಶುಚಿಯಾಗಿ ಇಡಲು ಸೂಚನೆ ನೀಡಿದರು. ಆಸ್ಪತ್ರೆಯನ್ನು ಸರಿಯಾದ ರೀತಿಯಲ್ಲಿ  ಕೆಲಸ ಮಾಡಲು ಅಲ್ಲಿನ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.

ಔಷಧ ದಾಸ್ತಾನು ಕೊಠಡಿಗೆ ಭೇಟಿ ನೀಡಿ ಅವಧಿ ಮುಗಿದಿರುವ ಔಷಧಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿಯ ಕಾರ್ಯ  ನಿರ್ವಾಹಕ ಅಧಿಕಾರಿ ರವಿ.ಎ.ಎನ್  ಸಹಾಯಕ ನಿರ್ದೇಶಕ ರಿಯಾಜ ಖತೀಬ್, ಅಬ್ಬಿಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಹಿತ ಎಮ್, ಹಾಗು ಹಿರೇಹಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದಳವಾಯಿ ಸೇರಿದಂತೆ, ಎಡಿಪಿಸಿ ಕಿರಣಕುಮಾರ, ಖಿಅ,ಖಿIಇಅ,ಖಿಂ,ಃಈಖಿ, ಉಏಒ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net