ಶತಮಾನದ ಶಾಲೆ ಅಭಿವೃದ್ಧಿಗೆ ಬದ್ಧ

h13-abbayya
filter: 0; fileterIntensity: 0.0; filterMask: 0; captureOrientation: 0; module: video; hw-remosaic: false; touch: (-1.0, -1.0); modeInfo: Beauty ; sceneMode: 0; cct_value: 5656; AI_Scene: (-1, -1); aec_lux: 266.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 38;
Published on

ಹುಬ್ಬಳ್ಳಿ: ಶತಮಾನದ ಹೊಸ್ತಿಲಲ್ಲಿರುವ ಈ ಶಾಲೆ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಇಂಡಿಪಂಪ್ ಬಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಆರಂಭಿಸಲಾದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
1934ರಲ್ಲಿ ಪ್ರಾರಂಭಿಸಲಾದ ಈ ಶಾಲೆಗೆ 90ವರ್ಷಗಳು ತುಂಬಿವೆ. ಕಳೆದ 90ವರ್ಷದಿಂದ ಅಕ್ಷರ ದಾಸೋಹ ಮಾಡುತ್ತಿರುವ ಈ ಶಾಲೆಯ ಅಭಿವೃದ್ಧಿಗೆ ಬದ್ಧನಿದ್ದೇನೆ. ಇಲ್ಲಿರುವ ಹಳೆಯ ಕಟ್ಟಡ ತೆರವುಗೊಳಿಸಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಡೆಸ್ಕ್, ಗಣಕಯಂತ್ರ, ಪ್ರಿಂಟರ್ ಸೇರಿದಂತೆ ವಿವಿಧ ಸಲಕರಣೆಗಾಗಿ ಬೇಡಿಕೆ ಇಡಲಾಗಿದೆ. ಕೂಡಲೇ ಪೂರೈಕೆ ಮಾಡಲಾಗುವುದು ಎಂದರು.
ಪ್ರಾಚಾರ್ಯ ಹೇಮಂತ ಕುಂದರಗಿ, ಮುಖಂಡರಾದ ಸೈಯದ್ ಅಲೀಂ ಮುಲ್ಲಾ, ಮುಸ್ತಾಕ್ ಅತ್ತಾರ, ಶ್ರೀನಿವಾಸ ಬೆಳದಡಿ, ಪ್ರೇಮನಾಥ ಚಿಕ್ಕತುಂಬಳ, ಶಫಿ ಯಾದಗಿರಿ, ರವಿ ಬಂಕಾಪುರ, ಆರೀಫ ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net