

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಶುಭ ಹಾರೈಸಿದರು. ಅಥಣಿ ತಾಲೂಕಿನ
ಮುರಗುಂಡಿಯಿಂದ ಕಾಗವಾಡ, ಚಿಕ್ಕೋಡಿ, ಗೋಟೂರ ವರೆಗೆ 87 ಕಿಮೀ ದೂರದ ಚತುಷ್ಟಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಶಿರಗುಪ್ಪಿಯಿಂದ ಅಂಕಲಿ ಮೇಲ್ಸೇತುವೆ ಕಾಮಗಾರಿಗೆ ಅನುದಾನ ಮಂಜೂರು ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. 2,811.69 ಕೋಟಿ ರೂ.ವೆಚ್ಚದ
ಯೋಜನೆಯು ನಿಮ್ಮ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಡಾ.ಪ್ರಭಾಕರ ಕೋರೆ ಸಚಿವರಿಗೆ ವಿನಂತಿಸಿದರು.
ಈ ರಸ್ತೆ ಕಾಮಗಾರಿ ಯೋಜನೆಯು ಈ ಭಾಗದ ಜನತೆಯ ಬಹುದಿನಗಳ ಕನಸಾಗಿತ್ತು. ವ್ಯಾಪಾರ-ವಹಿವಾಟಿಗೆ ಸಂಪರ್ಕ ಕಲ್ಪಿಸುವುದರೊಂದಿಗೆ ದಿನನಿತ್ಯದ ಸಂಚಾರಕ್ಕೂ ರಸ್ತೆ ಅನುಕೂಲವಾಗಲಿದೆ. ನವೀಕರಿಸಬಹುದಾದ ಎಥೆನಾಲ್ ಬಳಕೆಯಿಂದ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಸಾಧ್ಯವಾಗಲಿದ್ದು, ಇನ್ನೂ ಹೆಚ್ಚು ಎಥೆನಾಲ್ ಘಟಕಗಳು ದೇಶದಲ್ಲಿ ರೂಪುಗೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಡಾ.ಕೋರೆ ವಿನಂತಿಸಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಇತರರಿದ್ದರು.