

ರಾಯಚೂರು ಉಪಸಭಾಪತಿ ಹುದ್ದೆಯನ್ನು ೨೦೧೯ ರಿಂದ ಖಾಲಿಯಾಗಿ ಉಳಿಸಿ ಸದನ ಸುಗಮ ನಿರ್ವಹಣೆಗೆ ಸರ್ಕಾರವೇ ಅಡ್ಡಿಯಾಗಿದೆ. ವಿರೋಧ ಪಕ್ಷದ ನಾಯಕರಿಗೆ ಸದನದಲ್ಲಿ ಮಾತನಾಡಲು ಸಹ ಅವಕಾಶ ನೀಡದೇ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆAದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದನದಲ್ಲಿ ವಿರೋಧಪಕ್ಷ ನಾಯಕ ಹಾಗೂ ಸಂಸದರ ಮೈಕ್ರೋ-ೆÇÃನ್‌ಗಳನ್ನು ಬಂದ್ ಮಾಡಲಾಗುತ್ತಿದೆ. ನ್ಯಾಯಸಮ್ಮತವಾಗಿ ಪ್ರತಿಯೊಬ್ಬ ಸದಸ್ಯರಿಗೆ ಇರುವ ಸಂಸದೀಯ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.
ಸಂಸತ್ ಕಾರ್ಯಕಲಾಪ ಸಲಹಾ ಸಮಿತಿಯನ್ನು ಸಹ ಪರಿಗಣಿಸದೇ ಮಾಹಿತಿಯೂ ನೀಡದೇ ಏಕಪಕ್ಷೀಯವಾಗಿ ನಡೆದುಕೊಳ್ಳಲಾಗುತ್ತಿದೆ. ಬಜೆಟ್ ಮತ್ತು ಅನುದಾನಗಳ ಬೇಡಿಕೆ ಕುರಿತು ಚರ್ಚೆಗಳಲ್ಲಿಯೂ ಸಹ ಸಚಿವಾಲಯಗಳನು ಹೊರಗಿಡುವದು ,ಚರ್ಚೆಗೆ ಅವಕಾಶ ನೀಡದೇ ಇರುವದು ಪ್ರಜಾಪ್ರಭುತ್ವ ವ್ಯವಸ್ಥೆ ಧಕ್ಕೆ ತರುವಪ್ರಯತ್ನಗಳಾಗಿವೆ. ತುರ್ತು ಚರ್ಚೆಗಳಿಗೂ ಅವಕಾಶವಿಲ್ಲ. ಮತದಾನವಿಲ್ಲದೇ ಚರ್ಚೆಗಳಿಗೆ ಅನುಮತಿಸಲಾಗುತ್ತಿದೆ.
ಸಂಸದೀಯ ಸ್ಥಾಯಿ ಸಮಿತಿ ಹಸ್ತಕ್ಷೇಪ ಹೆಚ್ಚಳವಾಗುತ್ತಿದ್ದು, ಸ್ಪೀಕರ ಕಚೇರಿಯ ಹಸ್ತಕ್ಷೇಪದಿಂದ ವರದಿಗಳಲ್ಲಿಯಯೂ ತಿದ್ದುಪಡಿಗಳಾಗುತ್ತಿವೆ. ರಾಷ್ಟಿçÃಯ ವಿಷಯಗಳ ಪ್ರಸ್ತಾಪಿಸುವ ಹಕ್ಕುಸಹ ಇಲ್ಲದಂತಾಗಿದೆ. ಪ್ರತಿಪಕ್ಷದ ನಾಯಕರು ಮಾತನಾಡುವದನ್ನು ಸಂಸದ್ ಟಿವಿಯಲ್ಲಿಪ್ರಚಾರ ಮಾಡದಂತೆ ತಡೆಯಲಾಗುತ್ತಿದೆ. ಸಭಾನಾಯಕರು, ಸಂಸದರು ಮಾತನಾಡುವದನ್ನು ಪ್ರಚಾರ ಮಾಡದೇ ಏಕಮುಖ ಪ್ರಸಾರ ನಡೆಸಲಾಗುತ್ತಿರುವದು ಶಾಸಕಾಂಗ ವ್ಯವಸ್ಥೆಯ ಮೇಲೆ ಅಪನಂಬಿಕೆ ಮೂಡಲು ಕಾರಣವಾಗುತ್ತಿದೆ ಎಂದು ಆರೋಪಿಸಿದರು.
ಇತ್ತಿಚ್ಚಿಗೆ ಸದನದಲ್ಲಿ ರಾಯಚೂರಿನಲ್ಲಿ ಏಮ್ಸ್ ಮಂಜೂರು ಮಾಡಲು ಬಿಜೆಪಿ ಸಂಸದ ಡಾ.ಮಂಜುನಾಥ ಇವರು ವಿಷಯ ಪ್ರಸ್ತಾಪಿಸಿರುವದು ಸ್ವಾಗತಾರ್ಹವಾಗಿದ್ದು, ಈ ಕುರಿತ ಎಕ್ಸ್ ಖಾತೆಯಲ್ಲಿ ಅಭಿಪ್ರಾಯವನ್ನು ಹಾಕಲಾಗಿತ್ತು. ಆದರೆ ಏಕ್ಸ್ ಖಾತೆಯಲ್ಲಿ ಏಮ್ಸ್ ಕುರಿತು ಅಭಿಪ್ರಾಯವನ್ನು ಸಹಿಸದೇ ಯಾರೊ ನನ್ನ ಖಾತೆಯಾನ್ನು ಹ್ಯಾಕ್ ಮಾಡಿ ಡಿಲಿಟ್ ಮಾಡಿದ್ದಾರೆ. ಈ ಕುರಿತು ದೂರು ದಾಖಲಿಸಲು ಯೋಚಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜು, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ಅಮರೇಗೌಡ ಹಂಚಿನಾಳ, ಕೆ.ಶಾಂತಪ್ಪ, ಜಯಣ್ಣ ಇದ್ದರು.